Belagavi News In Kannada | News Belgaum

ಯರಡಾಲ ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣೆ

ಬೈಲಹೊಂಗಲ- ತಾಲೂಕಿನ ಯರಡಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶುಕ್ರವಾರ ನಯಾನಗರದ ಉದ್ಯಮಿ ಹಾಗೂ ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ನಾರಾಯಣ ನಲವಡೆ ನೇತೃತ್ವದಲ್ಲಿ ಪಠ್ಯೇತರ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಭೀಮಪ್ಪ ಕಮತಗಿ, ಈರಪ್ಪ ಬನಶೆಟ್ಟಿ, ಮಹಾಂತೇಶ ರಾಜಗೋಳಿ, ಬಾಬು ಕರಿಮುದಕನ್ನವರ, ಪ್ರಭಾರಿ ಮುಖ್ಯೋಪಾಧ್ಯಾಯ ವ್ಹಿ.ವಾಯ್.ಕರ್ಲೆಪ್ಪನವರ, ಶಿಕ್ಷಕಿಯರಾದ ಸಿ.ಎಂ.ಗಡದವರ, ಎಂ.ಬಿ.ತಿಗಡಿ, ಪಿ.ಎಸ್.ಸಂಗಮಿ, ಎಸ್.ಎಂ.ಮುಶೆಪ್ಪಗೋಳ, ಕೆ.ಜಿ.ಪುಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೋಟೋ ಶಿರ್ಷಿಕೆ- ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.