ಉದ್ಯಾನವನಗಳ ಅಭಿವೃಧ್ದಿಗೆಒತ್ತು ನೀಡಿದ ಶಾಸಕ ಅನಿಲ ಬೆನಕೆ

ಬೆಳಗಾವಿ 11 :ಉದ್ಯಾನವನಗಳ ಅಭಿವೃಧ್ದಿಗೆಒತ್ತು ನೀಡಿದ ಶಾಸಕ ಅನಿಲ ಬೆನಕೆ :
ದಿನಾಂಕ 11.03.2023 ರಂದುಶಾಸಕ ಅನಿಲ ಬೆನಕೆರವರುಮಹಾನಗರ ಪಾಲಿಕೆಯಅನುದಾನದಲ್ಲಿಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನವಿವಿಧಉದ್ಯಾನವನಗಳಲ್ಲಿ ಆಟಿಕೆ ಸಾಮಗ್ರಿಗಳನ್ನು ಅಳವಡಿಸಿದ್ದು, ಅವುಗಳನ್ನು ಇಂದು ಸಾರ್ವಜನಿಕರಉಪಯೋಗಕ್ಕೆನೀಡಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಶಾಸಕರು ಬೆಳಗಾವಿ ನಗರದಲ್ಲಿನ ಉದ್ಯಾನವನಗಳಲ್ಲಿ ಮಕ್ಕಳಿಗೆ ಆಟದ ಸಾಮಗ್ರಿ ಹಾಗೂ ವ್ಯಾಯಾಮ ಸಾಮಗ್ರಿಗಳ ಕೊರತೆಇರುವುದನ್ನು ಗಮನಿಸಿ ಸೂಕ್ತ ವ್ಯವಸ್ಥೆಕಲ್ಪಿಸುವದೃಷ್ಠಿಯಿಂದಮಹಾಂತೇಶ ನಗರದರಾಣಿಚೆನ್ನಮ್ಮಉದ್ಯಾನವನ, ಸೆ.ನಂ. 11 ರ ಪ್ರಗತಿಉದ್ಯಾನವನ, ಚಂದ್ರಮೌಳಿ ಕಾಲೋನಿಯಉದ್ಯಾನವನ, ಸೆ.ನಂ. 5 ರ ಮಾಳ ಮಾರುತಿ ಪೊಲೀಸ್‍ಠಾಣೆಯಎದುರುಗಡೆಯಉದ್ಯಾನವನ, ಆಂಜನೆಯ ನಗರ ಮಂದಿರ ಹತ್ತಿರದಉದ್ಯಾನವನ, ಸೆ.ನಂ. 8ರ ಉದ್ಯಾನವನ, ಸೆ.ನಂ. 9 ರ ನಂದಿನಿ ಮಾರ್ಗದ ಹತ್ತಿರದಉದ್ಯಾನವನ ಹಾಗೂ ಚೆನ್ನಮ್ಮ ಸೋಸಾಯಿಟಿ ಉದ್ಯಾನವನಗಳಲ್ಲಿ ಆಟಿಕೆ ಸಾಮಗ್ರಿಗಳನ್ನು ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದಉದ್ಘಾಟಿಸಲಾಗಿದೆ.
ಅದುಅಲ್ಲದೆಸದ್ಯ ಬೆಸಿಗೆ ರಜೆ ಬರುತ್ತಿರುವುದರಿಂದ ಶಾಲಾ ಮಕ್ಕಳು ಹೆಚ್ಚಾಗಿ ಉದ್ಯಾನವನಕ್ಕೆಆಗಮಿಸುತ್ತಾರೆ. ಆದ್ದರಿಂದಅವರ ಮನರಂಜೆನಗೆ ಹಾಗೂ ಅವರಆರೋಗ್ಯದೃಷ್ಠಿಯಿಂದಆಟಿಕೆ ಹಾಗೂ ವ್ಯಾಯಾಮ ಸಾಮಗ್ರಿಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಉತ್ತಮರೀತಿಯಲ್ಲಿಉಪಯೋಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆಅಲ್ಲಿನ ನಗರ ಸೇವಕರುಗಳು, ಕಾರ್ಯಕರ್ತರು, ರಹವಾಸಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.