ಪಾರ್ಟಿಗೆ ಹೋಗಿದ್ದ ಯುವಕ ಸಾವು ಕುಟುಂಬಸ್ಥರ ಆಕ್ರಂದನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಸ್ನೇಹಿತರ ಜೊತೆ ಪಾರ್ಟಿಗೆ ಅಂತಾ ಹೋಗಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ನಗರದ ರೈಲ್ವೆ ಪ್ಲೈ ಓವರ್ ಬಳಿಯ ಸಂಗೊಳ್ಳಿ ರಾಯಣ್ಣ ಬಳಿ ಸ್ನೇಹಿತರಿಬ್ಬರು ಎಣ್ಣೆ ಪಾರ್ಟಿ ಮಾಡಿದ್ದರು. ಸುರೇಶ್ ಗೆ ಫಲ್ಸರ್ ಬೈಕ್ನಲ್ಲಿ ಬಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಈ ವೇಳೆ ಆತನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆಂದು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾದೇ ಸುರೇಶ್ ಮೃತಪಟ್ಟಿದ್ದಾನೆ. ಈತ ಶಿವಮೊಗ್ಗದ ಶರಾವತಿ ನಗರದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ಇದ್ದವರು.
ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ನಿರ್ಬಹಿಸುತ್ತಿದ್ದನು. ಇದೀಗ ಸುರೇಶ್ ಸಾವು ಕುಟುಂಬಸ್ಥರಿಗೆ ಶಾಕ್ ಆಗಿದೆ. ಈ ಘಟನೆ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಇನ್ನು ಮೃತ ಸುರೇಶ್ ಮೈಮೇಲೆ ಅಪಘಾತದ ಯಾವುದೇ ಗಾಯಗಳಿಲ್ಲ. ಈ ನಡುವೆ ಆತ ಹೇಗೆ ಮೃತಪಟ್ಟನು ಎನ್ನುವ ಅನುಮಾನ ಕಾಡುತ್ತಿದೆ.