Belagavi News In Kannada | News Belgaum

ಮಾರ್ಚ 11 ರಿಂದ ಬಸವನ ಕುಡಚಿಜಾತ್ರಾ ಮಹೋತ್ಸವ : ಶಾಸಕ ಅನಿಲ ಬೆನಕ ಭಾಗಿ


ಬೆಳಗಾವಿ,  ಮಾರ್ಚ 11 ರಿಂದ ಬಸವನ ಕುಡಚಿಜಾತ್ರಾ ಮಹೋತ್ಸವ : ಶಾಸಕ ಅನಿಲ ಬೆನಕ ಭಾಗಿ
ಪ್ರತಿವರ್ಷದಂತೆ ಈ ವರ್ಷವೂ ಬೆಳಗಾವಿ ತಾಲೂಕಿನ ಬಸವನ ಕುಡಚಿಯಲ್ಲಿ ಶ್ರೀ ಬಸವಣ್ಣ, ಕಲಮೇಶ್ವರ, ಬ್ರಮ್ಹದೇವರಜಾತ್ರೆ 2023ರ ಮಾರ್ಚ 11 ರಿಂದ 22ರವರೆಗೆ ನಡೆಯಲಿದೆ.
ಶನಿವಾರ ಬೆಳಗ್ಗೆ ಸಾವಿರಾರುಗ್ರಾಮಸ್ಥರುಎತ್ತಿನ ಗಾಡಿಗಳೊಂದಿಗೆ ಕಾಕತಿ ಪರ್ವತಕ್ಕೆ ತೆರಳಲಿದ್ದ, ಸಂಜೆ 6 ಗಂಟೆಗೆಗ್ರಾಮಸ್ಥರು ಸೌದೆಯೋಂದಿಗೆಗ್ರಾಮಕ್ಕೆಆಗಮಿಸಲಿದ್ದಾರೆ. ಬಳಿಕ ಸೋಮವಾರಬೆಳಗ್ಗೆ ಸರಿಯಾದ ಪೂಜೆಯ ನಂತರ ಸಂಜೆ 4 ಗಂಟೆಗೆ ಹರಹರ ಮಹಾದೇವರ ನಾದದೋಂದಿಗೆ ಅಂಬಲಿ ಮೆರಣಿಗೆ ನಡೆಯಲಿಗೆ. ಮಂಗಳವಾರ ದೇವರಿಗೆಅಭಿಷೇಕ ಸಲ್ಲಿಸಿದ ನಂತರ ಸಂಜೆ 5 ಗಂಟೆಗೆ ಕಿಚ್ಚ ಹಾಯುವಕಾರ್ಯಕ್ರಮ ನಡೆಯಲಿದ್ದು, ಬುಧವಾರ ಹಾಗೂ ಗುರುವಾರಖಲ್ಲಿಕುಸ್ತಿ ನಡೆಯಲಿದೆ. ಪಾಡವ ದಿನದಂದುಜಾತ್ರೆ ನಡೆಯುತ್ತಿತ್ತು. ಬೆಳಗಾವಿ ನಗರದಿಂದಐದುಕಿಲೋಮೀಟರದೂರದಲ್ಲಿರುವ ಬಸವನ ಕುಡಚಿಗ್ರಾಮವು ಸರ್ವಧರ್ಮಗಳ ಸಂಗಮವಾಗಿದೆ. ಬಸವೇಶ್ವರ, ಕಲ್ಮೇಶ್ವರ ಮತ್ತು ಬ್ರಮ್ಹದೇವರ ಪುಣ್ಯಕ್ಷೇತ್ರವಾಗಿರುವ ಈ ಕ್ಷೇತ್ರವು ಸಹಸ್ರಾರು ಭಕ್ತರಆರಾಧನೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಗ್ರಾಮಸ್ಥರಿಗೆ 9 ಸಾವಿರ ಬಾಳೆಹಣ್ಣು, 7 ಕ್ವಿಂಟಾಲ ಗುಗ್ಗರಿ ಕಾಳು, 500 ಕಲ್ಲಂಗಡೆ ಹಣ್ಣು ವಿತರಿಸಿ ಜಾತ್ರೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಅವರೊಂದಿಗೆ ಬಸವನ ಕುಡಚಿಗ್ರಾಮದ ಪಂಚರು, ಗುರು ಹಿರಿಯರು, ಯುವಕರು, ಮಕ್ಕಳು ಭಾಗವಹಿಸಿದ್ದರು.