Belagavi News In Kannada | News Belgaum

ತಾತ್ಯಾಸಾಹೇಬ ಸೋಮಶೇಖರ ದೇಸಾಯಿ ನಿಧನ

ಬೈಲಹೊಂಗಲ- ತಾತ್ಯಾಸಾಹೇಬ ಸೋಮಶೇಖರ ದೇಸಾಯಿ ಸಮೀಪದ ಮುರಗೋಡ ಗ್ರಾಮದ ಗಣ್ಯರಾದ ತಾತ್ಯಾಸಾಹೇಬ ಸೋಮಶೇಖರ ದೇಸಾಯಿ(79)
ಶನಿವಾರ ನಿಧನರಾದರು. ಮೃತರಿಗೆ ಪತ್ನಿ. ಓರ್ವ ಪುತ್ರ, ಇಬ್ಬರು ಪುತ್ರಿಯರು ಅಪಾರ
ಬಂಧು ಬಳಗ ಇದ್ದರೆ.
ಸಂತಾಪ: ತಾತ್ಯಾಸಾಹೇಬ ಸೋಮಶೇಖರ ದೇಸಾಯಿ ಅವರ ನಿಧನಕ್ಕೆ ಅರಭಾವಿ ಮಠದ ಸಿದ್ದಲಿಂಗ
ಸ್ವಾಮಿಜಿ, ಮುರಗೋಡ ನೀಲಕಂಠ ಸ್ವಾಮೀಜಿ,ಬೈಲಹೊಂಗಲ ಮೂರು ಸಾವಿರ ಮಠದ ಪ್ರಭು ನೀಲಕಂಠ
ಸ್ವಾಮೀಜಿ, ಕೆಂಗೇರಿ ಮಠದ ದಿವಾಕರ ದೀಕ್ಷಿತ ಸ್ವಾಮೀಜಿ ಶಾಸಕ ಮಹಾಂತೇಶ ಕೌಜಲಗಿ,
ಕಾಡಾ ಅಧ್ಯಕ್ಷ ಡಾ ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಜೆಡಿಎಸ್
ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ