Belagavi News In Kannada | News Belgaum

ಕ್ಷೇತ್ರದ ಅಭಿವೃದ್ದಿಗೆ ನಾಗರೀಕರ ಸಹಕಾರ ಅಗತ್ಯ: ಶಾಸಕ ಮಹಾಂತೇಶ ಕೌಜಲಗಿ

ಬೈಲಹೊಂಗಲ: ಪಟ್ಟಣ, ಮತಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದು ನಾಗರೀಕರು ಸಹಕರಿಸಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ರವಿವಾರ ಪಟ್ಟಣದ ಬಾಯಪಾಸ್ ರಸ್ತೆಯಿಂದ ಮೂಳಕೂರ ರಸ್ತೆ ವರೆಗೆ ಪಂಚಾಯತ ರಾಜ್ ಇಂಜನೀಯರಿಂದ ಉಪವಿಭಾಗದ ಅಡಿಯಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈ ಭಾಗದ ರಸ್ತೆಯು  ಜನತೆಯ  ಬಹು ದಿನದ ಬೇಡಿಕೆಯಾಗಿತ್ತು. ಈ ಕುರಿತು ನಾಗರೀಕರ ಸಮಸ್ಯೆಗೆ ಸ್ಪಂದಿಸಿ ಡಾಂಬರೀಕರಣ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಗುತ್ತಿಗೆದಾರನು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಂಡು ಜನತೆಗೆ ಅನುಕೂಲ ಮಾಡಿಕೊಡಬೇಕು ಕಾಮಗಾರಿ ನಡೆಯುವ ವೇಳೆ ಜನತೆ ಸಹಕರಸಬೇಕು ಎಂದರಲ್ಲದೇ ಗುಣಮಟ್ಟದ ಕಾಮಗಾರಿ ಕುರಿತು ನಿಗಾವಹಿಸಬೇಕೆಂದರು. ಈಗಾಗಲೇ ಹಲವಾರು ವಾರ್ಡುಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು ಹಂತ ಹಂತವಾಗಿ ಒಳ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗವುದು ಎಂದರು.
ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಮಾತನಾಡಿ, ಈಗಾಗಲೇ ಶಾಸಕರು ನಗರ ಅಭಿವೃದ್ದಿಗೆ ನೂರಾರು ಕೋಟಿ ಅನುದಾನಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು, ಉಳಿದ ರಸ್ತೆಗಳನ್ನು ಶೀಘ್ರದಲ್ಲಿ ಅಭಿವೃದ್ದಿಪಡಿಸಲಾಗವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಾಬು ಕುಡಸೋಮನ್ನರ, ಅಂಬಿಕಾ ಕೊಟಬಾಗಿ, ಸುಷ್ಮಾ ಗುಂಡ್ಲೂರ, ಗಂಗಪ್ಪ ತುರಮರಿ, ಹಿರಿಯ ವಕೀಲ ಜೆ.ಕೆ.ರೀಝಾ, ಎಂ.ಎಂ.ಸೋಪಿನ, ನಜೀರ ಬೇಪಾರಿ, ಬಾಬು ಕೋತಂಬ್ರಿ, ಮುಶೆಪ್ಪ ತೋಟಗಿ, ಮುದುಕಪ್ಪ ಈಟಿ, ಗಂಗಪ್ಪ ಗುಗ್ಗರಿ, ಬಸವಂತ ತಗಲದ, ಪ್ರಕಾಶ ಕೊಟಬಾಗಿ,  ಉಳವಪ್ಪ ಕಾಚಿ, ಮುರಗೇಶ ಗುಂಡ್ಲೂರ, ಇಮ್ರಾನ ಕಿತ್ತೂರ, ಚಂದ್ರು ಹೊಸೂರ, ಸುರೇಶ ಮದಲಭಾಂವಿ, ಹಸನ ಗೊರವನಕೊಳ್ಳ, ಅರುಣ ಭಾಂವಿಹಾಳ, ಟಿ.ಬಿ. ಮಾವಿನಕಟ್ಟಿ,  ಡಿ.ಜಿ. ಪಾಟೀಲ, ರೆಹಮತ ಮುಲ್ಲಾ, ಸಿದ್ದು ಬೆಳಗಾವಿ, ಉಳವಪ್ಪ ಹುಣಶೀಕಟ್ಟಿ, ಮಹೇಶ ಮಿಸಿಗೇರಿ, ಫಾರುಖ ರೀಝಾ, ಗುತ್ತಿಗೆದಾರ ಎಂ.ಬಿ.ಹಿರೇಮಠ,  ಹಾಗೂ ವಾರ್ಡಿನ ನಾಗರೀಕರು ಇದ್ದರು./////