ಹನಿಟ್ರ್ಯಾಪ್ ಮಾಡಲು ಹೋಗಿ ಪೋಲಿಸರ ಅತಿಥಿಯಾದ ಗ್ಯಾಂಗ್

ಬೆಂಗಳೂರು: ಹನಿಟ್ರ್ಯಾಪ್ ಮಾಡಲು ಹೋಗಿದ್ದ ಗ್ಯಾಂಗವೊದನ್ನು ಖೆಡ್ಡಾಕ್ಕೆ ಕೆಡವಿದ ನಗರದ ಬೇಗೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕುಖ್ಯಾತ ಹನಿಟ್ರ್ಯಾಪ್ ಗ್ಯಾಂಗ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಬೆಚ್ಚಿ ಬೀಳಿಸೋ ಸಂಗತಿಗಳು ಹೊರ ಬಿದ್ದಿವೆ. ಈ ಗ್ಯಾಂಗ್ ಹಿಂದೆಯು ಕೂಡ ಇದೇ ರೀತಿ ಹನಿಟ್ರ್ಯಾಪ್ ಮಾಡಲು ಹೋಗಿ ಫೇಲ್ ಅಗಿದ್ದರು. 2 ಬಾರಿ ಇಂತಹ ಕೃತ್ಯಕ್ಕೆ ಕೈ ಹಾಕಿ ವಿಫಲವಾಗಿದ್ದರು. ಹೀಗಾಗಿ ಈ ಬಾರಿ ಸಕ್ಸಸ್ ಅಗಲೆಬೇಕು ಎಂದು ಮತ್ತೆ ಕೆಲಸಕ್ಕೆ ಕೈ ಹಾಕಿದ್ದರು. ಆದರೆ ಆಗಿದ್ದೆ ಬೇರೆ. ಬಡೋ ಅಂಡ್ ಟ್ಯಾಗಡ್ ಎಂಬ ವೆಬ್ಸೈಟ್ ಮೂಲಕ ಕಸ್ಟಮರ್ಗಳನ್ನ ಬಲೆಗೆ ಬೀಳಿಸುತ್ತಿದ್ದ ಗ್ಯಾಂಗ್ ಅತಿ ಆಸೆಗೆ ಬಿದ್ದು ಪೊಲೀಸರಿಗೆ ಲಾಕ್ ಅಗಿದ್ದಾರೆ./////