ಯುವ ಸಾಹಿತಿ ಬದರೀನಾಥರ ಗಹನ ಕೃತಿಗೆ ಅಪ್ಪ ಪ್ರಶಸ್ತಿ

ಹಾಸನ : ರುಶಿ ಪ್ರಕಾಶನ ಹಾಸನ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಸಹಯೋಗದೊಂದಿಗೆ ದಿನಾಂಕ :12/03/2023 ರಂದು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ಸಮಾರಂಭದಲ್ಲಿ ಯುವ ಸಾಹಿತಿ ಡಾ.. ಬದರೀನಾಥ ಜಹಗೀರದಾರರ ಗಹನ ಕಥಾ ಸಂಕಲನಕ್ಕೆ 2023ನೇ ಸಾಲಿನ ಅಪ್ಪ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀ ಶಂಭುನಾಥ ಮಹಾಸ್ವಾಮಿಗಳು, ಆದಿ ಚುಂಚನಗಿರಿ ಮಹಾಸಂಸ್ಥಾನ ಇವರು ಶ್ರೀಮತಿ ಸುಮಾ ವಿಜಯ ಅಧ್ಯಕ್ಷರು ನೆರವೇರಿಸಿ ಮಾತನಾಡಿ ಇಂದು ಸಾಹಿತ್ಯ ನಿತ್ಯ ಜೀವನದ ಕೈ ಗನ್ನಡಿ, ಹೀಗಾಗಿ ಸಾಹಿತಿಗಳು ವಾಸ್ತವ ಸಂಗತಿಗಳ ಬಗ್ಗೆ ಧ್ಯಾನಿಸುವ ಅಗತ್ಯವಿದೆ. ಸಮಾಜದ ನ್ಯೂನ್ಯತೆಗಳನ್ನು ಸರಿಪಡಿಸುವ ಮಹತ್ತರ ಜವಾಬ್ದಾರಿಯನ್ನು ಸಾಹಿತಿಗಳು ವಹಿಸಿಕೊಂಡು ಮುನ್ನಡೆಯಬೇಕು ಎಂದರು.ನಾಡಿನ ಲೇಖಕರಿಂದ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿ ಸೂಕ್ತವಾದ ಕೃತಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಹೀಗೆ ನಾಡಿನಾದ್ಯಂತ ಪರಿಷತ್ತು ತನ್ನ ಕಾರ್ಯಕ್ರಮವನ್ನು ವಿಸ್ತರಿಸಿಕೊಂಡು ಸಾಗಲಿ ಎಂದು ಹಾರೈಸಿದರು. ಗಹನ ಕೃತಿಕಾರರಿಗೆ ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಹಂಪನಹಳ್ಳಿ ತಿಮ್ಮೆಗೌಡರು ಮಾತನಾಡಿ ನಾಡಿನ ಲೇಖಕರಿಂದ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿ ಸೂಕ್ತವಾದ ಕೃತಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಹೀಗೆ ನಾಡಿನಾದ್ಯಂತ ಪರಿಷತ್ತು ತನ್ನ ಕಾರ್ಯಕ್ರಮವನ್ನು ವಿಸ್ತರಿಸಿಕೊಂಡು ಸಾಗಲಿ ಎಂದರು. ರುಶಿ ಪ್ರಕಾಶನದ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಸಾಪ ಹಾಸನದ ಅಧ್ಯಕ್ಷರಾದ ಡಾ. ಮಲ್ಲೇಶಗೌಡರು ಮಾತನಾಡಿ ಇಂದಿನ ದಿನಮಾನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸುವ ಅನಿವಾರ್ಯತೆಯಿದೆ. ಹಾರೈಸಿದರು. ಗಹನ ಕೃತಿಕಾರರಿಗೆ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಪದ ತತ್ವಕಾರರಾದ ಶ್ರೀ ಜೆ. ಪಿ. ಶಿವ ನಂಜೇಗೌಡರು ಮಾತನಾಡಿ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ. ಸಾಹಿತಿಗಳು, ಸಂಘಟಕರು, ಸಾಹಿತ್ಯಾಭಿಮಾನಿಗಳನ್ನು ಒಗ್ಗೂಡಿಸಿದ ಈ ಕಾರ್ಯಕ್ರಮ ಸಮಾಜಕ್ಕೆ ಆದರ್ಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಅಂಜಲಿ ಬೆಳಗಲ್, ಶ್ರೀ ಜ್ಯೋತಿರಾಜ್, ಶ್ರೀ ಮೇಟಿಕೇರಿ ಹಿರಿಯಣ್ಣನವರು, ಶ್ರೀ ಈ. ಕೃಷ್ಣೆಗೌಡರು, ಆರ್. ಪೀ. ವೆಂಕಟೇಶಮೂರ್ತಿ, ಕೆ. ಪ್ರಕಾಶ್, ಶ್ರೀ ಎಚ್. ಎಲ್. ಚನ್ನೇಗೌಡರು, ಭಾರತಿ ಎಚ್ ಎಲ್, ಡಾ. ಟಿ. ಎಂ. ಕೃಷ್ಣಮೂರ್ತಿ, ರಶ್ಮಿ ಗೊರೂರು, ರುಶಿ ಪ್ರಕಾಶನದ ಸದಸ್ಯರುಗಳು, ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡ ಸಂಘಟಕರು, ಕಲಾವಿದರು ಉಪಸ್ಥಿತರಿದ್ದರು.