Belagavi News In Kannada | News Belgaum

ರಸ್ತೆ ಅಭಿವೃದ್ಧಿ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

ಬೆಳಗಾವಿ:  ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೋಳಿಕೊಪ್ಪ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ ನಂ.4 ರ ವರೆಗಿನ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 38.90 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಕೈಗೊಂಡು ಭಾನುವಾರ ಚಾಲನೆಯನ್ನು ನೀಡಿದರು.
ನಂತರ, ಕೋಳಿಕೊಪ್ಪ ಗ್ರಾಮದ ಶ್ರೀ ವಿಠ್ಠಲ ರುಕ್ಮಾಯಿ ಮಂದಿರದ ಜೀರ್ಣೋದ್ಧಾರದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು. ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ವತಿಯಿಂದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅವರು 15 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿದ್ದಾರೆ.
ಈ ಸಮಯದಲ್ಲಿ ರಾಜು ಜಾಧವ್, ಬಸವರಾಜ ನಾಯ್ಕ, ತುಕಾರಾಂ ಕೊಡಚವಾಡ್, ಮನೋಹರ ಬಾಂಡಗಿ ಶಿವಾನಂದ ಬಾಂಡಗಿ, ಪರಶುರಾಮ ಪೂಜಾರಿ, ಮಾರುತಿ ಕೊಡಚವಾಡ್ ಸಂತೋಷ್ ಜಾಧವ್, ರಾಜು ನಾಯ್ಕ್, ಫಕೀರ ಕುರೇರ್, ನಾಗೇಶ್ ಕೊಡಚವಾಡ, ಸೋಮನಾಥ, ರಮೇಶ ಕುರಿ, ನಿಂಗಾನಿ ನಾಯ್ಕ್, ಸುರೇಶ ಕೊಡಚವಾಡ, ಸಂತೋಷ್ ಜಾಧವ್  ಮುಂತಾದವರು ಉಪಸ್ಥಿತರಿದ್ದರು.