ಮಹಿಳೆಯರಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ

ಚನ್ನಮ್ಮನ ಕಿತ್ತೂರ: ಕಿತ್ತೂರು ವಿಧಾನ ಸಭಾ ಕ್ಷೇತ್ರದ ಅಂಬಡಗಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ ಆಕಾಂಕ್ಷಿಗಳಾದ ಹಬೀಬ ಶಿಲೇದಾರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳನ್ನು ಮಹಿಳೆಯರಿಗೆ ವಿತರಿಸಲಾಯಿತು.
ಕೆಪಿಸಿಸಿ ಸೂಚನೆಯ ಮೇರೆಗೆ ಕಾಂಗ್ರೆಸ್ ಗ್ಯಾರಂಟಿ ಕಾಡ೯ಗಳನ್ನು ಕಿತ್ತೂರು ವಿಧಾನ ಸಭಾ ಕ್ಷೇತ್ರದ ಅಂಬಡಗಟ್ಟಿ ಗ್ರಾಮದ ಜನತೆಗೆ ಹಾಗೂ ತಾಯಿದಿಂದರಿಗೆ ಮಾಹಿತಿ ನೀಡಿಲಾಯಿತು.
ಚನ್ನಮ್ಮನ ಕಿತ್ತೂರ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಹಬೀಬ ಶಿಲೇದಾರ ಮಾತನಾಡಿ, ಬಿಜೆಪಿಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ದಿನಸಿ ಬೆಲೆಗಳ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ.
ನಿತ್ಯ ದುಡಿದು ಜೀವನ ಸಾಗಿಸುವ ಜನತೆಗೆ ಬಿಜೆಪಿ ಆಡಳಿತ ಬಾರವಾಗಿದ್ದು, ಈ ಸರ್ಕಾರ ಕೆಳಗಿಸಲು ರಾಜ್ಯದ ಜನತೆ ಕಾಯ್ದು ಕುಳಿತ್ತಿದ್ದಾರೆ. ಮತದಾರರ ಆಶೀರ್ವಾದ ಮಾಡಿದರೆ, ರಾಜ್ಯದಲ್ಲಿ ಮತ್ತೆ “ಕೈ” ಅಧಿಕಾರಕ್ಕೆ ಬಂದು, ನಿಮ್ಮ ಆಸೆಗಳು ಈಡೇರಿಸುತ್ತದೆ. ಜನತೆಗೆ ನೆಮ್ಮದಿ ಬೇಕಾಗಿದೆ, ಅದು ಕಾಂಗ್ರೆಸ್ ನಿಂದ ಮಾತ್ರ , ಹೀಗಾಗಿ ಕಾಂಗ್ರೆಸ್ ಗೆಲಿಸುವ ಹೊಣೆ ನಿಮ್ಮ ಮೇಲಿದೆ ಎಂದರು.
1) ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿಗಳು ಅವರ ಖಾತೆ ಜಮಾ ಮಾಡುವ ಗ್ಯಾರಂಟಿ.
2) ಪ್ರತಿ ಮನೆಗೂ ಪ್ರತಿ ತಿಂಗಳು 200 ಯೂನಿಟ್ ಉಚಿತ ಕರೆಂಟ ನೀಡುವ ಗ್ಯಾರಂಟಿ.
4) ಪಡೀತರ ಚೀಟಿ ಹೊಂದಿದ ಪ್ರತಿಯೊಬ್ಬರಿಗೆ ಉಚಿತವಾಗಿ 10 kg ಅಕ್ಕಿ ನೀಡುವ ಕಾಂಗ್ರೆಸ್ ಗ್ಯಾರಂಟಿ ಕಾಡು೯ಗಳನ್ನು ನೀಡಿದೇವು.