Belagavi News In Kannada | News Belgaum

ಅಂತರಾಷ್ಟ್ರೀಯ ಮಹಿಳಾ ಸಶಕ್ತಿಕರಣ ದಿನಾಚರಣೆ


ಬೆಳಗಾವಿ :ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಶಹಾಪುರ ಶಾಖೆ, ಬೆಳಗಾವಿವತಿಯಿಂದ ರÀವಿವಾರ ದಿನಾಂಕ 12-03-2023 ರಂದು ಮಹಿಳಾ ದಿನ ಆಚರಿಸಲಾಯಿತು ಸಂಸ್ಥೆಯ ಉಪವಲಯ ಕೇಂದ್ರದ ನಿರ್ದೇಶಕರಾದ ರಾಜಯೋಗಿನಿ ಅಂಬಿಕಾಜಿ ಮಾತನಾಡುತ್ತ ಪರಮಾತ್ಮ ಶಿವನು ಬ್ರಹ್ಮಾರವರ ಮಾಧ್ಯಮದಿಂದ ಅವತರಿಸಿ ನಮ್ಮಲ್ಲಿರುವ ದುರ್ಗುಣಗಳ ಭಿಕ್ಷೆ ಬೇಡುತ್ತಿದ್ದಾರೆ. ಇಂದು ಮಾನವನ ಮನಸ್ಸು ಮಂಗನಂತೆ ಚಂಚಲವಾಗಿದೆ. ಇಂಥಃ ಮಂಗನಂತೆ ಇರುವ ಮಾನವನನ್ನು ಸತ್ಯವಾದ ಶ್ರೇಷ್ಠ ಗೀತಾ ಜ್ಞಾನವನ್ನು ಕೊಟ್ಟು ದೇವ ಮಾನವನನ್ನಾಗಿ ಮಾಡಲು ಬಂದಿದ್ದಾರೆ. ನಾರಿ ನರಕದ ದ್ವಾರ ಎಂದು ಸನ್ಯಾಸಿಗಳು ಹೇಳುತ್ತಿದ್ದಾರೆ, ಆದರೆ ಪರಮಾತ್ಮನು ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನಾರೀಯರನ್ನೆ ಮುಂದಿಟ್ಟು ಅಧ್ಯಾತ್ಮಿಕ ಕ್ರಾಂತಿಯನ್ನು ಮಾಡುತ್ತಾ “ನಾರಿ ಸ್ವರ್ಗದ ದ್ವಾರ” ಎಂದು ಇಡಿ ಜಗತ್ತಿಗೆ ಕಾರ್ಯ ಮಾಡಿ ತೋರಿಸುತ್ತಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ಶ್ರೀಮತಿ ರೇಷ್ಮಾ ಪಾಟೀಲ ಇವರು ಮಹಿಳಾ ದಿನಾಚರಣೆಗೆ ಶುಭ ಹಾರೈಸಿ, ತಮಗೆ ಸತ್ಕಾರ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಮಹಿಳಾ ಪೋಲಿಸ್ ಠಾಣೆಯ ಪೋಲಿಸ ಸಬ್ ಇನ್ಸಫೆಕ್ಟರಾದ ಶ್ರೀಮತಿ ಜಯಾ ನಾಗಣ್ಣವರ ಇವರು ಮಾತನಾಡುತ್ತ ಮಹಿಳೆಯರ ಎನೇ ಸಮಸ್ಯೆಗಳಿದ್ದರೆ ನಿಸ್ಸಂಕೋಚವಾಗಿ ಹೇಳಿ, ನಿಮ್ಮ ಸಹಾಯಕ್ಕಾಗಿ ತಕ್ಷಣ ಸ್ಪಂದಿಸುತ್ತೇವೆ. ಇಂದು ಮಹಿಳೆಯರು ಅಡಿಗೆಯಿಂದ ಹಿಡಿದು ಅಂತರಿಕ್ಷೆಯ ವರೆಗೆ ಸೇವೆ ಸಲ್ಲಿಸುತ್ತಿದ್ದಾರೆ.
ಗೋಪಾಲಜಿ ಇಂಟಿಗ್ರಟೆಡ ಪ್ರಿಯುನಿವರ್ಸಿಟಿ ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀಮತಿ ಪ್ರಿಯಾ ಮುಡಲಗಿ ಮಾತನಾಡುತ್ತಾ ಮಹಿಳಾ ಸಶಕ್ತಿಕರಣವು ಆತ್ಮ ಸಶಕ್ತಿಕರಣ ದಿವಸ ಇದಾಗಿದೆ. ಹೇಗೆ ಒಳ್ಳೆಯ ಬೀಜ, ಒಳ್ಳೆಯ ಫಲ ಕೊಡುತ್ತದೆಯೊ ಹಾಗೆ ಚಿಕ್ಕ ಮಕ್ಕಳಿದ್ದಾಗಲೆ ಅವರಿಗೆ ಒಳ್ಳೆಯ ಸಂಸ್ಕಾರ ಕೊಡಬೇಕೆಂದು ಹೇಳಿದರು.
ಭರತೇಶ ಕಾಲೇಜಿನಿ ಕನ್ನಡ ಮಾಧ್ಯಮದ ಪ್ರಿನ್ಸಿಪಾಲರಾದ ಶ್ರೀಮತಿ ಜ್ಯೋತಿ ಮಿರಜಕರ ಹವಳ ಇವರು ಮಾತನಾಡುತ್ತ, ಈ ಸಂಸ್ಥೆಯ ಮುಖ್ಯಾಲಯ ಮೌಂಟ ಅಬುವಿನಲ್ಲಿ ದೊರೆತ ಪ್ರೀತಿ ವಾತ್ಸಲ್ಯದ ಅನುಭವ ಈ ಕಾರ್ಯಕ್ರಮದಲ್ಲಿ ಆಯಿತು. ಮಹಿಳೆಯರಿಗೆ ಕಷ್ಟಗಳು, ಸಮಸ್ಯೆಗಳು ಬರುತ್ತವೆ ಅದನ್ನು ದೈರ್ಯದಿಂದ ಎದುರಿಸಿ ಮುನ್ನಡೆಯಬೇಕು ಹಾಗೂ ಶಿಕ್ಷಣ ಪಡೆದು ಉನ್ನತಿ ಪಡೆಯಿರಿ ಎಂದು ಕರೆಕೊಟ್ಟರು.
ಡಾ|| ಅನೀತಾ ಉಮದಿ ಇವರು ಮಾತನಾಡುತ್ತ ವಾರಕ್ಕೆ ಒಂದು ಅಥವಾ ಎರಡು ಸಲ ಆರೋಗ್ಯ ಜಾಗೃತಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.
ಬಂದ ಎಲ್ಲ ಅತಿಥಿಗಳಿಗೆ ಹೂವು ಗುಚ್ಛ ಕೊಟ್ಟು, ಈಶ್ವರೀಯ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಅನೇಕ ಮಹಿಳೆಯರು ಭಾಗವಹಿಸಿದರು.
ಬಿ. ಕೆ. ಶೋಭಾ ಕಾರ್ಯಕ್ರಮ ನಿರೂಪಿಸಿದರು.
ಬಿ. ಕೆ. ಮೀನಾಕ್ಷಿ ಇವರು ವಂದಿಸಿದರು.