ಸಚಿವರೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ

ಗದಗ: ನಮ್ಮ ಯಾವ ಮಂತ್ರಿಗಳೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ. ಇದು ಡಿಜಿಟಲ್ ಯುಗವಾದ್ದರಿಂದ ಹೊರ ಬರುತ್ತಿರಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ರೋಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಹೆಸರಲ್ಲಿ ಓರ್ವ ಮಂತ್ರಿಗೆ ಡಿ.ಕೆ. ಶಿವಕುಮಾರ ಬೆದರಿಸುತ್ತಿದ್ದಾರೆಂಬ ಆರೋಪಿಸಿದ್ದು,
ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮಾಹಿತಿ ಇರಬಹುದು ಎಂದಿದ್ದಾರೆ. ಸಿಎಂ ತಾರತಮ್ಯದಿಂದ ನಾರಾಯಣಗೌಡ ಪಕ್ಷ ಬಿಡುತ್ತಾರೆಂಬ ಆರೋಪವಿದ್ದು, ಊಹಾಪೋಹ ಬಗ್ಗೆ ಉತ್ತರಿಸುವುದಿಲ್ಲ ಎಂದರು. ಅರ್ಕಾವತಿ ಪ್ರಕರಣದ ಮಾಧ್ಯಮದವರು ಪ್ರಶ್ನೆ ಮಾಡಿದ್ದು, ಬಗ್ಗೆ ಈಗ ಮಾತನಾಡಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.