ಸರಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ. : ಅಧ್ಯಕ್ಷ ರಮೇಶ ಕತ್ತಿ.

ಹುಕ್ಕೇರಿ: ಸದೃಢ ಆರೋಗ್ಯ ಸಮಾಜಕ್ಕೆ ಜನರ ಮನೆ ಬಾಗಿಲಿಗೆ ಸರಕಾರದ ಯೋಜನೆಗಳು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ- ರಮೇಶ ಕತ್ತಿ ತಿಳಿಸಿದರು.
ಅವರು ಪಟ್ಟಣದ ಹಳ್ಳದಕೇರಿಯಲ್ಲಿ ಭಾಗದಲ್ಲಿ ಆರೋಗ್ಯ ಇಲಾಖೆ ಹಾಗೂ ಪುರಸಭೆ ಆಶ್ರಯದಲ್ಲಿ ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನಮ್ಮ ಕ್ಲಿನಿಕ್, ಉದ್ಘಾಟಿಸಿದರು.
ಯಾಂತ್ರಿಕತೆಯ ಬದುಕಿನಲ್ಲಿ ಹಿಂದಿನ ಗಿಡಮೂಲಿಕೆ, ವ್ಯಾಯಾಮ,ಆಯಾಮಗಳ ಆರೋಗ್ಯವನ್ನು ನಿರ್ಲಕ್ಷಿಸಿ, ಕ್ಷಣಿಕ ವಿಶ್ರಾಂತಿ ಗಾಗಿ ವಿಪರೀತ ಮಾತ್ರೆಗಳ ಸೇವನೆಯಿಂದ ಬದುಕಿನ ದಾರಿ ತಪ್ಪುತಿದ್ದೇವೆಂದರು.
ಕೈ ತೊಳೆದುಕೊಳ್ಳದ ಸೇವನೆಯಿಂದ ಹೆಚ್ಚು ರೋಗಗಳಿಗೆ ಅಹ್ವಾನ ನೀಡುತ್ತಿದ್ದೇವೆಂದರು.
ಸಹೋದರ ಶಾಸಕ ಉಮೇಶ ಕತ್ತಿ ಅವರ ಪ್ರಯತ್ನ ದಿಂದ ಹುಕ್ಕೇರಿಯಲ್ಲಿ ಮತ್ತು ಸಂಕೇಶ್ವರ ನಗರಸಭೆ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್ ಮಂಜೂರಾಗಿ ಸೇವೆಗೆ ಸಿದ್ದವಾಗಿದ್ದು ಮೂರು ಜನ ವೈದ್ಯರು, ಸೇವೆ ಸಲ್ಲಿಸಿದ್ದಾರೆ. ಇದ್ದರಿಂದ ವೃದ್ಧರಿಗೆ ಹೆಣ್ಣು ಮಕ್ಕಳಿಗೆ ಅನೂಕೂಲವಾಗಲಿದೆಂದರು.
ಟಿಹೆಚ್.ಓ ಡಾ ಉದಯ ಕುಡಚಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ವಿರಕ್ತಮಠದ ಶಿವಬಸವ ಶ್ರೀಗಳು,ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಪುರಸಭೆ ಅಧ್ಯಕ್ಷ ಎ.ಕೆ ಪಾಟೀಲ, ಉಪಾಧ್ಯಕ್ಷ ಆನಂದ ಗಂಧ,ವಿದ್ಯುತ್ ಸಂಘದ ನಿರ್ದೇಶಕ ಜಯಗೌಡ ಪಾಟೀಲ, ಮಹಾವೀರ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸತ್ಯಪ್ಪ ನಾಯಿಕ, ಪುರಸಭೆ ಸದಸ್ಯರಾದ ರಾಜು ಮುನ್ನೋಳಿ. ಮಹಾಂತೇಶ ತಳವಾರ.ಸಿದ್ದಪ್ಪ , ಉದಯ ಹುಕ್ಕೇರಿ, ಡಾ.ಮಹಾಂತೇಶ ನರಸನ್ನವರ, ಮುಖ್ಯಾಧಿಕಾರಿ ಮೋಹನ ಜಾಧವ ಮತ್ತಿತರರು. ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಅಡವಿಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಿಗೆ ಸಾಲಪತ್ರ ವಿತರಣೆ ಮಾಡಿದರು.
ಪೆÇೀಟೋ ಶೀರ್ಷಿಕೆ 13ಊuಞ01
ಹುಕ್ಕೇರಿಯಪಟ್ಟಣದ ಹಳ್ಳದಕೇರಿಯಲ್ಲಿ ಭಾಗದಲ್ಲಿ ಆರೋಗ್ಯ ಇಲಾಖೆ ಹಾಗೂ ಪುರಸಭೆ ಆಶ್ರಯದಲ್ಲಿ ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನಮ್ಮ ಕ್ಲಿನಿಕ್, ಬಿಡಿಸಿಸಿ ಅಧ್ಯಕ್ಷ ರಮೇಶ ಕತ್ತಿ ಉದ್ಘಾಟಿಸಿದರು. ಶ್ರೀಗಳು ಉಪಸ್ಥಿತರಿದ್ದರು