Belagavi News In Kannada | News Belgaum

ರಾಮನಗರದಿಂದ ಡಿ.ಕೆ.ಸುರೇಶ್ ಸ್ಪರ್ಧೆಗೆ ಪ್ರಸ್ತಾವನೆ : ಡಿಕೆಶಿ

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ವಸತಿ ಸಚಿವರಾಗಿರುವ ವಿ.ಸೋಮಣ್ಣ ಕಾಂಗ್ರೆಸ್ ಸೇರುವ ಬಗ್ಗೆ ಎಲ್ಲಿಯೂ ಹೇಳಿಲ್ಲ, ನಮ್ಮನ್ನು ಕೇಳಿಲ್ಲ. ನಾವು ಕೂಡ ಅವರನ್ನು ಪಕ್ಷಕ್ಕೆ ಬರುವಂತೆ ಕರೆದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸೋಮಣ್ಣ ನಮ್ಮ ತಾಲ್ಲೂಕಿನವರು, ನಾನು ಸ್ರ್ಪಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಕಾಡಿನ ನಡುವೆ ಅವರ ಸ್ವಂತ ಮನೆಯಿದೆ. ಮೊನ್ನೆ ಕೂಡ ಅವರು ಊರಿಗೆ ಹೋಗಿದ್ದರು. ನಾವು ಅವರು ರಾಜಕಾರಣ ಹೊರತಾಗಿ ಉತ್ತಮ ಬಾಂಧವ್ಯ ಹೊಂದಿದ್ದೇವೆ.

ಧರ್ಮ, ಮಠ ಮಾನ್ಯಗಳ ಸೇವೆಂ ಜೊತೆಗೂಡಿ ಕೆಲಸ ಮಾಡಿದ್ದೇವೆ. ಹಿಂದೆ ವಿಧಾನಸಭೆ ಅಧಿವೇಶನ ಮುಗಿಸಿ ವಾಪಾಸ್ ಬರುವಾಗ ಫ್ಲೈಟ್‍ನಲ್ಲಿ ಒಟ್ಟಿಗೆ ಕುಳಿತಿದ್ದೇವೆ. ಅದನ್ನು ಈಗ ವೈರಲ್ ಮಾಡಲಾಗುತ್ತಿದೆ. ಜೊತೆಯಲ್ಲಿ ಕುಳಿತುಕೊಳ್ಳುವುದು ಅಪರಾಧವೇ ? ಅನಗತ್ಯವಾಗಿ ಈ ವಿಷಯದಲ್ಲಿ ಸೋಮಣ್ಣ ಅವರನ್ನು ಎಳೆದು ತರುತ್ತಿರುವುದು ಸರಿಯಲ್ಲ ಎಂದರು.

ಸಂಸದರೂ ಆಗಿರುವ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಬೇಕು ಎಂಬ ಪ್ರಸ್ತಾವನೆ ಇದೆ. ಈ ಬಗ್ಗೆ ತಾವಿನ್ನು ಖುದ್ದು ಡಿ.ಕೆ.ಸುರೇಶ್ ಸೇರಿದಂತೆ ಯಾರೊಂದಿಗೂ ಚರ್ಚೆ ಮಾಡಿಲ್ಲ. ಕಾರ್ಯಕರ್ತರು , ಸ್ಥಳೀಯ ನಾಯಕರು ಒತ್ತಡ ಹೇರುತ್ತಿದ್ದಾರೆ.

ಆಗು ಹೋಗುಗಳ ಬಗ್ಗೆ ನಾನೀನ್ನೂ ಚರ್ಚೆ ಮಾಡಿಲ್ಲ. ಪ್ರಸ್ತಾವ ಇರುವುದನ್ನು ತಳ್ಳಿ ಹಾಕುವುದಿಲ್ಲ. ಇದು ರಾಜ್ಯ ಮಟ್ಟದಲ್ಲೇ ಕೇಳಿ ಬಂದಿಲ್ಲ. ಇಲ್ಲಿ ಏನೇ ಆದರೂ ಪಕ್ಷದ ಅಧ್ಯಕ್ಷನಾಗಿ ನಾನೇ ಹೇಳಬೇಕು. ಮೇಲ್ಮಟ್ಟದಿಂದ ಪ್ರಸ್ತಾವ ಇದೆ. ಆದರೆ ಸುರೇಶ್ ವಿಧಾನಸಭೆಗೆ ಸ್ರ್ಪಸುವುದರಿಂದ ಲೋಕಸಭೆಗೆ ಮತ್ತೊಂದು ಉಪಚುನಾವಣೆ ನಡೆಯಬೇಕಾಗುತ್ತದೆ. ಇದು ನನಗೆ ಇಷ್ಟವಿಲ್ಲ. ಎಲ್ಲವನ್ನೂ ಪರಿಶೀಲಿಸುತ್ತಿದ್ದೇ/////