Belagavi News In Kannada | News Belgaum

ಮಾ. 19 ರಂದು ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನ

ಧಾರವಾಡ: ಪೊಲೀಸ್‌ ತರಬೇತಿ ಶಾಲೆಯ 8ನೇ ತಂಡದ 201 ನಾಗರಿಕ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಮಾ. 19ರಂದು ಬೆಳಗ್ಗೆ 8ಗಂಟೆಗೆ ಕಲಘಟಗಿ ರಸ್ತೆಯ ಗಿರಿನಗರದ ಪೊಲೀಸ್‌ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ನಡೆಯಲಿದೆ ಎಂದು ಪೊಲೀಸ್ ತರಬೇತಿ ಶಾಲೆ ಪೊಲೀಸ್ ಅಧೀಕ್ಷಕ ಎಂ.ಎಂ. ಯಾದವಾಡ ತಿಳಿಸಿದ್ದಾರೆ.

ರಾಜ್ಯ ಪೊಲೀಸ್‌ ತರಬೇತಿ ವಿಭಾಗದ ಪೊಲೀಸ್‌ ಮಹಾ ನಿರ್ದೇಶಕ ಡಾ. ಪಿ. ರವೀಂದ್ರನಾಥ್ ಅತಿಥಿಯಾಗಿ ಆಗಮಿಸುವರು. ಪಥಸಂಚಲನ ಪರಿವೀಕ್ಷಣೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ಜರುಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////