ಪ್ರೌಢ ಶಾಲೆ ಮಂಜೂರಾತಿಗಾಗಿ ಆಗ್ರಹಿಸಿ ರಕ್ತದಲ್ಲಿ ಪತ್ರ ಬರೆದ ಕುಕಡೊಳ್ಳಿ ಗ್ರಾಮಸ್ಥರು

ಬೆಳಗಾವಿ: ಬಹು ವರ್ಷಗಳ ಬೇಡಿಕೆಯಾದ ನೂತನ ಪ್ರೌಢ ಶಾಲೆಯ ಮಂಜೂರಾತಿಗಾಗಿ ಕುಕಡೊಳ್ಳಿ ಗ್ರಾಮಸ್ಥರು ರಕ್ತದಲ್ಲಿ ಪತ್ರ ಬರೆದು ರಾಜ್ಯಪಾಲರಿಗೆ, ಮುಖ್ಯ ಮಂತ್ರಿಗೆ ಹಾಗೂ ಶಿಕ್ಷಣ ಸಚಿವವರಿಗೆ ಪೋಸ್ಟ ಮುಖಾಂತರ ಮನವಿ ರವಾನಿಸಿದರು.
ಗ್ರಾಮದಲ್ಲಿ ನೂತನ ಪ್ರೌಢ ಶಾಲೆಯ ಮಂಜೂರಾತಿ ಮಾಡುವಂತೆ ಅನೇಕ ಭಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಕುಕಡೊಳ್ಳಿ ಗ್ರಾಮಕ್ಕೆ ನೂತನ ಪ್ರೌಢ ಶಾಲೆಯ ಮಂಜೂರು ಮಾಡಬೇಕೆಂದು ರಕ್ತದಲ್ಲಿ ಕುಕಡೊಳ್ಳಿ ಗ್ರಾಮಸ್ಥರು ಮನವಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾಮದ ಯುವಕರಾದ ಮಾರುತಿ ಸಾರಾವರಿ, ವಿಠ್ಠಲ ಬಡಸ, ರಮೇಶ ಲಕಮೋಜಿ,ಪುಂಡಲಿಕ ರಜಪೂತ,ಕಿರಣ ಹಟ್ಟಿ, ಶ್ರೀಕಾಂತ ಹಟ್ಟಿ , ಬಾಬು ಲಕಮೋಜಿ, ಬಸ್ಸು ಗಾಡಿಕೊಪ್ಪ, ರಾಮಕೃಷ್ಣ ವಡ್ಡಿನ , ತುಕಾರಾಮ ಹಟ್ಟಿ, ವಿಜಯ ವಡ್ಡಿನ. ಸೇರಿದಂತೆ ಕುಕಡೊಳ್ಳಿ ಗ್ರಾಮಸ್ಥರು ಇದ್ದರು./////