Belagavi News In Kannada | News Belgaum

ಮಾ. 17 ರಂದು ಬೆಳಗಾವಿಯಲ್ಲಿ ಅಪ್ಪು ಜನ್ಮದಿನೋತ್ಸವ

ಬೆಳಗಾವಿ: ಡಾ|| ಪು£ತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 17 ರಂದು “ ಅಪ್ಪು ಜನ್ಮದಿನೋತ್ಸವ “ ಕಾರ್ಯಕ್ರಮ ನಡೆಯಲಿದೆ.

ನಗರದ ಕ್ಲಬ್ ರೋಡ್ ನಲ್ಲಿರುವ ಸಿ.ಪಿ.ಇ.ಡಿ ಗ್ರೌಂಡ್‍ನಲ್ಲಿ ಅದ್ದೂರಿ ಸಮಾರಂಭವನ್ನು ಅಪ್ಪು ಅಭಿಮಾನಿ ಬಳಗ ಅಯೋಜಿಸಿದೆ. ಅಂದು ಸಂಜೆ 4.30 ರಿಂದ ಕಾರ್ಯಕ್ರಮಗಳು ಆರಂಭವಾಗಲಿದ್ದು, ಈ ಶುಭ ಸಂದರ್ಭದಲ್ಲಿ ಮಮತ ಕ್ರಿಯೇಷನ್ ಬ್ಯಾನರ್‍ನಲ್ಲಿ ನಿರ್ಮಾಣವಾಗಿರುವ “ಪರ್ಯಾಯ” ಕನ್ನಡ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗುವುದು ಎಂದು ಅಪ್ಪು ಜನ್ಮದಿನೋತ್ಸವ ದ ಸಂಘಟಕರಾದ ರಾಜಕುಮಾರ್ ತಿಳಿಸಿದ್ದಾರೆ.

ಶ್ರೀ ಶಂಕರಲಿಂಗ ಗುರುಪೀಠ ಸುಕ್ಷೇತ್ರ ಕೆಸರಟ್ಟೆಯ ಗುರುಗಳಾದ ಶ್ರೀ  ಸೋಮಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಬೆಳಗಾವಿ ಗ್ರಾಮಾಂತರ ಶಾಸಕರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಬಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ರಮಾನಂದ ಮಿತ್ರ, ಮಮತ ಕ್ರಿಯೇಷನ್‍ನ ರಾಜಕುಮಾರ, ಸಹ ನಿರ್ಮಾಪಕರಾದ ಮುರುಗೇಶ್ ಬಿ ಶಿವಪೂಜಿ, ಶಿವಾನಂದ್ ಹಾಗೂ ಹಲವಾರು ಕಲಾವಿದರು ಉಪಸ್ಥಿತರಿರುತ್ತಾರೆ.

ಪುನಿತ್ ರಾಜ್‍ಕುಮಾರ್ ಅವರ ಚಲನಚಿತ್ರದ  ಜನಪ್ರಿಯ ಹಾಡುಗಳನ್ನು ಸ್ಥಳೀಯ ಕಲಾವಿದರು ಹಾಡಲಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಅಭಿಮಾನಿ ಕಲಾ ಪ್ರೇಕ್ಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ  ಎಂದು ಅಪ್ಪು ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.//// /