Belagavi News In Kannada | News Belgaum

ಬೆಳಗಾವಿಯಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ರಶೀದಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು: ಅಪರ ಜಿಲ್ಲಾಧಿಕಾರಿ ಶಾಂತಲಾ

ಬೆಳಗಾವಿಯಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ರಶೀದಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು: ಅಪರ ಜಿಲ್ಲಾಧಿಕಾರಿ ಶಾಂತಲಾ

ಬೆಳಗಾವಿ, ಮಾ.15 : ಗ್ರಾಹಕರು ಯಾವುದೇ ವಸ್ತು ಖರೀದಿ ಮಾಡುವಾಗ ರಶೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಹಾಗೂ ಅದರ ಸೀಮಿತ ಅವಧಿಯನ್ನು ಪರಿಶೀಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ( ಡಿ.ಸಿ.ಐ.ಸಿ) ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆ ಹಾಗೂ ಇತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಮಾ.15) ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಅದೇ ರೀತಿ ಎಲ್ಲ ಮಕ್ಕಳಿಗೆ ಗ್ರಾಹಕ ಹಕ್ಕುಗಳ ಬಗ್ಗೆ ತಿಳುವಳಿಕೆಯನ್ನು ನೀಡಬೇಕು.
ಗ್ರಾಹಕರ ಹಿತಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳ ಯೋಜನೆ ಕುರಿತು ಗ್ರಾಹಕರಿಗೆ ಅರಿವು ಮೂಡಿಸಬೇಕು. ಗೃಹ ಬಳಕೆ ವಸ್ತುಗಳನ್ನು ಖರೀದಿಸುವಾಗ ಅಥವಾ ಪಡೆದ ಸೇವೆಗಳಿಗಾಗಿ ತಪ್ಪದೇ ರಸೀದಿ ಪಡೆದುಕೊಳ್ಳಬೇಕು ಎಂದು ಶಾಂತಲಾ ಅವರು ಹೇಳಿದರು.
ಸಮಾಜದಲ್ಲಿರುವ ಬಡವರು, ಶ್ರೀಮಂತರಿಗೆ ಆಸ್ಪತ್ರೆ ಕೋರ್ಟ್ ಪೆÇಲೀಸ್ ಸೇರಿದಂತೆ ಅನೇಕ ಸಮಸ್ಯೆಗಳಿರುತ್ತವೆ. ಶ್ರೀಮಂತರು ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಪಡೆಯುತ್ತಾರೆ. ಅದೇ ರೀತಿಯಲ್ಲಿ ವಕೀಲರು ಶ್ರೀಮಂತರ ಪರವಾಗಿ ವಾದ ಮಾಡಿದರೆ ಬಡವರ ಪರವಾಗಿ ಸರ್ಕಾರಿ ವಕೀಲರು ಸರಿಸಮನಾಗಿ ವಾದವನ್ನು ಮಂಡಿಸಲು ನಿಯೋಜನೆ ಮಾಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಮುರಳೀಮೋಹನ್ ರೆಡ್ಡಿ ಅವರು ತಿಳಿಸಿದರು.
ವಿಶೇಷ ಉಪನ್ಯಾಸ ನ್ಯಾಯವಾದಿ ಅಶೋಕ ಹಲಗಲಿ ಅವರು, ಪ್ರಕೃತಿ ಮೇಲಿನ ದುಷ್ಪರಿಣಾಮದಿಂದ ನಮ್ಮ ಆರೋಗ್ಯ ಹಾನಿಯಾಗುತ್ತಿದೆ. ಸರಿಯಾದ ರೀತಿಯಲ್ಲಿ ನೀರು, ಗಾಳಿ ದೊರಕುತ್ತಿಲ್ಲ. ಆದಕಾರಣ 2019ರಲ್ಲಿ ಸರ್ಕಾರವು ಎಲೆಕ್ಟ್ರಿಕಲ್ ಬೈಕ್ ಹಾಗೂ ಕಾರ್ ಚಾಲ್ತಿಯಲ್ಲಿ ತಂದಿದ್ದು, ಜನರು ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.
ಗ್ರಾಹಕರು ಯಾವುದೇ ವಸ್ತುವಿನಲ್ಲಿ ಖರೀದಿಯಲ್ಲಿ ಮೋಸ ಹೋದಲ್ಲಿ ಕಾನೂನಿನ ಮೊರೆ ಹೋಗಬಹುದು. ಕಾನೂನಿನ ಪ್ರಕಾರ ಪರಿಹಾರವನ್ನು ಪಡೆದುಕೊಳ್ಳಬೇಕು ಎಂದು ಅಶೋಕ ಹಲಗಲಿ ಅವರು ಹೇಳಿದರು.
ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸುವ ಮುಂಚೆ ಗುಣಮಟ್ಟದ್ದು ಎಂಬುದನ್ನು ತಿಳಿದುಕೊಳ್ಳಬೇಕು, ಎಲ್ಲರೂ ಗ್ರಾಹಕ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು, ಯಾವುದೇ ವಸ್ತು ಖರೀದಿಸುವಾಗ ತಪ್ಪು ಕಂಡು ಬಂದಲ್ಲಿ ಕಾನೂನಿನ ಮರೆ ಹೋಗಬಹುದು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ರಾಚಪ್ಪ ತಾಳಿಕೋಟಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ಕಂಕಣವಾಡಿ, ಜಿಲ್ಲಾ ಗ್ರಾಹಕರ ಆಯೋಗದ ಹೆಚ್ಚುವರಿ ಅಧ್ಯಕ್ಷ ರಾದ ಸಂಜೀವ್ ವಿ.ಕುಲಕರ್ಣಿ, ಗ್ರಾಹಕರ ಆಯೋಗದ ಸದಸ್ಯರಾದ ಸುನಚಿದಾ ಎನ್. ಕಾದ್ರೊಳ್ಳಿಮಠ, ಜಿಲ್ಲಾ ಗ್ರಾಹಕ ಮಹಿಳಾ ಸದಸ್ಯರಾದ ನಚಿiÀುನಾ ಎಂ. ಕಾಮಟೆ, ಡೆಪ್ಯುಟಿ ಕಂಟ್ರೋಲರ್ ಸದಾಶಿವ್ ಮಾಳಿ ಮತ್ತಿತರರು ಉಪಸ್ಥಿತರಿದ್ದರು.////

ಎಸ್.ಎಸ್.ಎಲ್.ಸಿ/ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಜಿಲ್ಲಾ ಮಟ್ಟದ ಅಪ್ರೆಂಟಿಸ್ ಮೇಳ

 

ಬೆಳಗಾವಿ, ಮಾ.15 : ಶಿಶುಕ್ಷು ತರಬೇತಿ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಹಾಗೂ ತರಬೇತಿದಾರರಿಗೆ ಅನುಕೂಲವಾಗುವಂತೆ ಜಿಲ್ಲಾ ಮಟ್ಟದ(Pಒಓಂಒ) ಅಪ್ರೆಂಟಿಸ್ ಮೇಳವನ್ನು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೆ.ಎಲ್.ಇ ಆಸ್ಪತ್ರೆ ಎದುರು ಗೋಕಾಕ ಇಲ್ಲಿ ಮಾರ್ಚ.20 2023 ರಂದು ಬೆಳಿಗ್ಗೆ 10.30 ಗಂಟೆಗೆ ಆಯೋಜಿಸಲಾಗಿದೆ.
ಸದರಿ ಮೇಳದಲ್ಲಿ ಹಲವಾರು ಉದ್ಯಮಿಗಳು ಭಾಗವಹಿಸಲಿದ್ದು, ಆಸಕ್ತ ಎಸ್.ಎಸ್.ಎಲ್.ಸಿ/ಐಟಿಐ ಪಾಸಾದ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರ ಕಾರ್ಯಾಲಯ ಸ.ಕೈ.ತ.ಸಂಸ್ಥೆ ಗೋಕಾಕ- ದೂರವಾಣಿ ಮತ್ತು ಫ್ಯಾಕ್ಸ್ ಸಂಖ್ಯೆ 08332224006 ಗೆ ಅಥವಾ ಇಮೇಲ್ ವಿಳಾಸ govtitigkk@gmail.com  ಅಥವಾ ಮೊಬೈಲ್ ಸಂಖ್ಯೆ 7892955100, 9341671956 ಗೆ ಸಂಪರ್ಕಿಸಬಹುದು ಎಂದು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಮಾ.16 ರಿಂದ

ಬೆಳಗಾವಿ, ಮಾ.15 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸ್ತ್ರೀಶಕ್ತಿ ಗುಂಪುಗಳಿಂದ ಉತ್ತಮ ಗುಣಮಟ್ಟದ ಆಕರ್ಷಣೀಯವಾದ ಮತ್ತು ವೈಶಿಷ್ಟ್ಯವುಳ್ಳ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಬೆಳಗಾವಿಯ ಸರ್ದಾರ ಮೈದಾನದಲ್ಲಿ ಮಾರ್ಚ 16 ರಿಂದ ಮಾ.22 ರವರೆಗೆ 7 ದಿನಗಳವರೆಗೆ ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಎಂ. ಎ ಬಸವರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಸ್ವ-ಸಹಾಯ ಸಂಘದ ಮಹಿಳೆಯರಿಂದ ತಯಾರಿಸಲ್ಪಟ್ಟ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ

 

ಬೆಳಗಾವಿ, ಮಾ.15 : ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ಎನ್.ಆರ್.ಎಲ್.ಎಮ್ ಮತ್ತು ಎನ್.ಯೂ.ಎಲ್.ಎಮ್ ಜಿಲ್ಲಾ ಪಂಚಾಯತ ಬೆಳಗಾವಿ ಇವರ ವತಿಯಿಂದ ಮಾರ್ಚ.8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಳಗಾವಿಯ ಜಿಲ್ಲಾ ಕನ್ನಡ ಸಾಹಿತ್ಯ ಸಭಾಭವನ, ಚೆನ್ನಮ್ಮ ಸರ್ಕಲ್ ಹತ್ತಿರ ಜಿಲ್ಲಾ ಮಟ್ಟದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಂದ ತಯಾರಿಸಲ್ಪಟ್ಟ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಾ.16 2023 ರಿಂದ ಮಾ.19 2023 ರ ವರಗೆ 4 ದಿನಗಳ ಕಾಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///