Belagavi News In Kannada | News Belgaum

ಸೇನೆಯ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್‌ಗಳು ನಾಪತ್ತೆ ಹೆಲಿಕ್ಯಾಪ್ಟರ್ ಪ್ರಥನ

ಇಟಾನಗರ:    ಭಾರತೀಯ ಸೇನೆಯ  ಚೀತಾ ಹೆಲಿಕಾಪ್ಟರ್  ಅರುಣಾಚಲ ಪ್ರದೇಶದಲ್ಲಿ  ಗುರುವಾರ ಈ ಘಟನೆ ನಡೆದು ಹೆಲಿಕ್ಯಾಪ್ಟರ್ ಪತನಗೊಂಡಿದೆ.
ಮಾಹಿತಿ ಪ್ರಕಾರ, ರಾಜ್ಯದ ಬೊಮ್ಡಿಲಾ ಪಟ್ಟಣದ ಪಶ್ಚಿಮದಲ್ಲಿರುವ ಮಂಡಲ ಪ್ರದೇಶದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.

ಚೀತಾ ಹೆಲಿಕಾಪ್ಟರ್ ಗುರುವಾರ ಬೆಳಗ್ಗೆ ಸುಮಾರು 9.15 ಗಂಟೆಗೆ ಏರ್ ಟ್ರಾಫಿಕ್ ಕಂಟ್ರೋಲ್ ನೊಂದಿಗೆ ಸಂಪರ್ಕ ಕಳೆದುಕೊಂಡಿದೆ ಎಂದು ಗುವಾಹಟಿ ರಕ್ಷಣಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ದೃಢಪಡಿಸಿದ್ದಾರೆ.

 

ಘಟನೆ ಬಳಿಕ ಇಬ್ಬರು ಪೈಲಟ್‌ಗಳು ನಾಪತ್ತೆಯಾಗಿದ್ದು, ಸೇನೆಯಿಂದ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿದು ಹೇಳಲಾಗುತ್ತದೆ.