Belagavi News In Kannada | News Belgaum

ಹೆಬ್ಬಾಳಕರ ಹೆಣ್ಣಿನ ರೂಪವಷ್ಟೇ, ಅವರ ಗುಣಗಳೇ ಬೇರೆ: ಶಾಸಕ ರಮೇಶ್ ಜಾರಕಿಹೊಳಿ

ಬೆಳಗಾವಿ: ದೇಶದ ಇತಿಹಾಸದಲ್ಲೇ ಸಿಎಂ ಲೋಕಾರ್ಪಣೆ ಮಾಡಿದ ಬಳಿಕ ಎರಡನೇ ಬಾರಿ ಲೋಕಾರ್ಪಣೆ ಮಾಡಿದ್ದುನ್ನು ಎಲ್ಲೂ ನೋಡಿಲ್ಲ.

ಆ ಹೆಣ್ಣುಮಗಳದ್ದು ರೂಪ ಅಷ್ಟೇ,  ಆ ಗುಣಗಳೇ ಬೇರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ  ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂತಿಬಸ್ತವಾಡ  ಗ್ರಾಮದಲ್ಲಿ ಎಸ್‍ಸಿ ಎಸ್‍ಟಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಹೆಣ್ಣುಮಕ್ಕಳು, ನಿಮ್ಮ ಮನೆಮಗಳು, ನಿಮ್ಮ ಮನೆಯ ಸೊಸೆ ಎಂದು ಹೇಳಿಕೊಂಡು ಬರುತ್ತಾರೆ, ಅವರನ್ನು ನಂಬಬೇಡಿ.  ಇನ್ನೂ ಅವರದು ಹೆಣ್ಣಿನ ರೂಪವಷ್ಟೇ, ಗುಣಗಳಲ್ಲ ಎಂದಿದ್ದಾರೆ.

ನಾನು ಮಂತ್ರಿಯಾದ ಮೇಲೆ ಗ್ರಾಮೀಣ ಕ್ಷೇತ್ರದಲ್ಲೂ ಸಹ ನಾನೇ ಕೆಲಸ ಮಾಡಿದ್ದು. ನನ್ನ ಹೆಸರಿನ ಲೆಟರ್ ಮೇಲೆಯೇ ಕೆಲಸಗಳು ನಡೆದಿದ್ದವು. ಆದರೆ ಶಾಸಕಿ ತಾನೇ ಮಾಡಿದ್ದು ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ ಮತ್ತು ನಾನು ಚುನಾವಣೆಯಲ್ಲಿ ಗೆಲ್ಲಿಸಲು ನಾನೇ ಕಾರಣ ಶಾಸಕರಾಗಿ ಎರಡು ದಿನದಲ್ಲಿ ಬದಲಾಗಿದ್ದಾರೆ ಅದುನು ನಾವು ಕಂಡಿದ್ದೇವೆ ಎಂದು ಕಿಡಿಕಾರಿದರು.