ಬೆಳಗಾವಿ: ಜಪ್ತಿ ಮಾಡಿದ ಸಾರಾಯಿಯನ್ನೇ ಎಗರಿಸಿದ ಅಬಕಾರಿ ಅಧಿಕಾರಿಗಳು, ಸಿಬ್ಬಂದಿ

ಬೆಳಗಾವಿ: ಜಪ್ತಿ ಮಾಡಿದ್ದ 753 ಸಾರಾಯಿ ಬಾಕ್ಸ್ಗಳ ಪೈಕಿ 301 ಬಾಕ್ಸ್‌ಗಳನ್ನೇ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕದ್ದಿದ್ದು, ಜಿಲ್ಲೆಯ ಅಬಕಾರಿ ಅಧಿಕಾರಿಗಳ ಕಾರ್ಯಯಕ್ಕೆ ಮೇಲಾಧಿಕಾರಿಗಳೇ ಶಾಕ್ ಆಗಿದ್ದಾರೆ.
ಇದು ಒಂದು ರೀತಿಯಲ್ಲಿ ಬೇಲಿಯೇ ಎದ್ದು ಹೋಲ ಮೈಯ್ದಂತಿದೆ. ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಾಗಿ ಇಡೀ ಅಬಕಾರಿ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ. 301 ಬಾಕ್ಸ್ನಲ್ಲಿದ್ದ 32 ಲಕ್ಷ ರೂ. ಮೌಲ್ಯದ ಇಂಪಿರಿಯಲ್ ಬ್ಲೂ, ವಿಸ್ಕಿ ಮದ್ಯದ ಬಾಟಲ್ ಕಳ್ಳತನ ಮಾಡಿದ್ದು, ಜಪ್ತಿಯಾದ ಮಾರನೇ ದಿನ ಐದು ಜನ ಸಿಬ್ಬಂದಿ ಮಾಡಿದ ಕರಾಮತ್ತು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಅಬಕಾರಿ ನಿರೀಕ್ಷಕ ದಾವಲಸಾಬ್ ಸಿಂದೋಗಿ, ಸದಾಶಿವ ಕೋರ್ತಿ, ಅಬಕಾರಿ ಉಪ ನಿರೀಕ್ಷಕಿ ಪುಷ್ಪಾ ಗದಾಡಿ ಸೇರಿದಂತೆ ಐವರು ಸಿಬ್ಬಂದಿ ಮೇಲೆ ಎಫ್ಆಯ್ಆರ್ ದಾಖಲು ಮಾಡಲಾಗಿದೆ. ಜೊತೆಗೆ ಸಿಬ್ಬಂದಿಗಳನ್ನು ಅಮಾನತು ಮಾಡಿ ಅಬಕಾರಿ ಡಿಸಿ ಆದೇಶ ಹೊರಡಿಸಿದ್ದಾರೆ.
ಚುನಾವಣೆ ನಿಮಿತ್ತ ಅಕ್ರಮವಾಗಿ ಸಾಗಿಸುತ್ತಿದ್ದ ಸಾರಾಯಿಯನ್ನು ಅಬಕಾರಿ ಅಧಿಕಾರಿಗಳು ಮಾ. 7ರಂದು ಜಿಲ್ಲೆಯ ಖಾನಾಪುರ ತಾಲೂಕಿನ ಮೋದೆಕೊಪ್ಪ ಗ್ರಾಮದ ಬಳಿ ಜಪ್ತಿ ಮಾಡಲಾಗಿತ್ತು. 12 ಚಕ್ರದ ಕಂಟೇನರ್ ವಾಹನದಲ್ಲಿ ಗೋವಾದಿಂದ ಸಾಗಿಸುತ್ತಿದ್ದಾಗ 753ಬಾಕ್ಸ್ ಅಕ್ರಮ ಮದ್ಯ ಸಿಕ್ಕಿತ್ತು. ಈ ವೇಳೆ 301ಬಾಕ್ಸ್‌ಗಳನ್ನ ಬಚ್ಚಿಟ್ಟು, ಕೇವಲ 452ಬಾಕ್ಸ್ ಜಪ್ತಿ ಮಾಡಿದ್ದೇವೆ ಎಂದು ಅಬಕಾರಿ ಸಿಬ್ಬಂದಿಗಳು ಸುಳ್ಳು ಕೇಸ್ ದಾಖಲಿಸಿದ್ದಾರೆ./////