Belagavi News In Kannada | News Belgaum

ನಾನು ಪೂಜಾರಿ ಅಷ್ಟೆ, ಜನ ಹೇಳಿದ್ದು ದೇವರಿಗೆ ತಲುಪಿಸುತ್ತೇನೆ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

ನವದೆಹಲಿ: ಎಐಸಿಸಿ ಅಧ್ಯಕ್ಷರಿಗೆ ಎಲ್ಲವೂ ಗೊತ್ತಿದೆ. ರಾಜ್ಯ ರಾಜಕಾರಣ ಗೊತ್ತಿದೆ. ನಾನು ಪೂಜಾರಿ ಅಷ್ಟೆ, ಜನ ಹೇಳಿದ್ದು ದೇವರಿಗೆ ತಲುಪಿಸುತ್ತೇನೆ. ದೇವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಶಾಸಕರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಆದರೆ ಇದೇ ವೇಳೆ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಬಗ್ಗೆ ಕೇಳಿದಾಗ ಡಿಕೆಶಿ ಉತ್ತರಿಸಲಿಲ್ಲ. ನನಗೆ ಯಾವುದೇ ಒತ್ತಡ ಇಲ್ಲ. ಮೂರು ವರ್ಷದಿಂದ ಪಕ್ಷ ಕಟ್ಟಿದ್ದೀವಿ. ಯಾರು ಕೆಲಸ ಮಾಡಿದ್ದಾರೆ ಗೊತ್ತಿದೆ. 1150 ಜನ ಅರ್ಜಿ ಹಾಕಿದ್ದಾರೆ. ಎಲ್ಲರಿಗೂ ಶಾಸಕರಾಗುವ ಆಸೆ ಇದೆ. ಟಿಕೆಟ್ ಸಿಗದಿದ್ದರೆ ಪರಿಷತ್ ನಲ್ಲಿ ಅವಕಾಶ ನೀಡಲಾಗುವುದು. ಕಷ್ಟ ಪಟ್ಟವರಿಗೆ ಬೇರೆ ಬೇರೆ ಸ್ಥಾನ ಮಾನ ನೀಡಲಾಗುವುದು. ನಾವು ಈಗಾಗಲೇ ಐದಾರು ಮೀಟಿಂಗ್ ಮಾಡಿದೆ. ಹಲವು ಸರ್ವೆಗಳನ್ನು ಮಾಡಿಸಿದೆ. ಎಲ್ಲವೂ ಆಧರಿಸಿ ನಿರ್ಧಾರಕ್ಕೆ ಬರ್ತೀವಿ ಎಂದು ಹೇಳಿದರು./////