Belagavi News In Kannada | News Belgaum

ನಗರದ ವಿವಿದೆಡೆ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆ ಚಾಲನೆ

ಬೆಳಗಾವಿ 18 :ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಮಹಾನಗರ ಪಾಲಿಕೆಯ ಅನುದಾನದಲ್ಲಿ ಬೆಳಗಾವಿ ನಗರದ ಮರಾಠಾ ಮಂಡಳ ದಿಂದ ಕೃಷ್ಣದೇವರಾಜ ವೃತ್ತ ಹಾಗೂ ರುಕ್ಮೀಣಿ ನಗರದಲ್ಲಿ ರಸ್ತೆ, ಚರಂಡಿ ಹಾಗೂ ಪೇವರ್ಸ ಅಳವಡಿಸುವ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಮಹಾನಗರ ಪಾಲಿಕೆ ಅನುದಾನದಲ್ಲಿ ಬೆಳಗಾವಿಯ ಕೃಷ್ಣದೇವರಾಜ ವ್ರತ್ತ (ಕೋಲ್ಹಾಪೂರ ವ್ರತ್ತ) ದಿಂದ ಮರಾಠಾ ಮಂಡಳದ ಅಂಧ ಮಕ್ಕಳ ಶಾಲೆಯ ಹತ್ತಿರದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮತ್ತು ರುಕ್ಮೀಣಿ ನಗರದಲ್ಲಿ ಪೇವರ್ಸ ಅಳವಡಿಸುವ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆಯಲ್ಲಿ ಸಲ್ಲಿಸಲಾಗಿದೆ. 17.94 ಲಕ್ಷ ವೆಚ್ಚದ ಕಾಮಗಾರಿಗಳಾಗಿದ್ದು, ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರ ಸೇವಕರು ಹಾಗೂ ಆಡಳಿತ ಪಕ್ಷ ನಾಯಕರಾದ ರಾಜಶೇಖರ ಢೋಣಿ, ನಗರ ಸೇವಕರಾದ ಹನಮಂತ ಕೊಂಗಾಲಿ, ಶಾಹೀದ ಪಠಾಣ, ಮಹಾನಗರ ಪಾಲಿಕೆಯ ಸಹಾಯಕ ಅಭಿಯಂತರುಗಳಾದ ಕೇರೂರ, ಯಲ್ಲಪ್ಪ ಸೇರಿದಂತೆ ಅಲ್ಲಿನ ಹಲವಾರು ಸ್ಥಳೀಯ ಕಾರ್ಯಕರ್ತರು, ರಹವಾಸಿಗಳು ಮತ್ತು ಗುತ್ತಿಗೆದಾರ ಸಿ. ಎಮ್. ನರಸನ್ನವರ ಉಪಸ್ಥಿತರಿದ್ದರು.