ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಿನ್ನಲೆ ಪತ್ರಿಕಾ ಗೋಸ್ಟೀ

ಹುಣಸಗಿ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಿನ್ನಲೆ ಪತ್ರಿಕಾ ಗೋಸ್ಟೀ* ಸಿದ್ದನಗೌಡ ಎನ್ ಬಿರಾದಾರ ಹುಣಸಗಿ : ನೂತನ ಹುಣಸಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಶೇಖರ ನಾಗಣ್ಣ ಸಾಹುಕಾರ್ ದಂಡಿನ ಸೋಮುವಾರ 20/ 3/ 2023ರಂದು ಅಧಿಕಾರ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪೂಗೌಡ ಪಾಟೀಲ್ ಸದಬ್ ಹೇಳಿದರು. ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಹಿನ್ನೆಲೆ ಕರೆದ ಪತ್ರಿಕಾ ಗೊಷ್ಟಿಯಲ್ಲಿ ಮಾತನಾಡಿದ ಅವರು ಈ ಹಿಂದಿನ ಅಧ್ಯಕ್ಷರಾದ ಮುದಿಗೌಡ ಕುಪ್ಪಿ ಅವರು ಸೋಮುವಾರ ನಡೆಯುವ ಕಾಂಗ್ರೆಸ್ ಪಕ್ಷದ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಧ್ವಜ ನೀಡಿ, ಜವಾಬ್ದಾರಿ ವಹಿಸುವರು ಎಂದು ಹೇಳಿದರು.