ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನೆ ಬಾರದ ಲೋಕಕ್ಕೆ ಕಳಿಸಿದ ಐನಾತಿ ಅಕ್ಕ ಪೊಲೀಸ್ ಖೆಡ್ಡಾ
ತಮ್ಮನ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಹಂತಕಿ ಅಕ್ಕ ಎಂಟು ವರ್ಷ ಬಳಿಕ ಅಂದರ್...

ಬೆಂಗಳೂರು: ಎಂಟು ವರ್ಷಗಳ ಹಿಂದೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಗೆ ಪ್ರಕರಣದ ರಹಸ್ಯ ಬಯಲು ಆಗಿದೆ. ಕಳೆದ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿ ಕತ್ತಲ ಕೋಣೆಗೆ ತಳ್ಳಿದ್ದಾರೆ.
ಭಾಗ್ಯಶ್ರೀ ಮತ್ತು ಸುಪುತ್ರ ಶಂಕರಪ್ಪ ತಳವಾರ ಬಂಧಿತ ಆರೋಪಿಗಳು. ಇಬ್ಬರು ಮೂಲತಃ ವಿಜಯಪುರ ಜಿಲ್ಲೆಯವರಾಗಿದ್ದರು. ಭಾಗ್ಯಶ್ರೀ ಮತ್ತು ಸುಪುತ್ರ ಬೆಂಗಳೂರು ಹೊರವಲಯ ಜಿಗಣಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಭಾಗ್ಯಶ್ರೀ ಮತ್ತು ಸುಪುತ್ರ ಜಿಗಣಿಯ ವಡೇರಮಂಚನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೊತೆಯಲ್ಲಿ ವಾಸವಾಗಿದ್ದರು.
ಮೊದಲ ಪತಿಯಿಂದ ದೂರವಾಗಿದ್ದ ಭಾಗ್ಯಶ್ರೀ ಬೆಂಗಳೂರಿಗೆ ಬಂದು ಮಾಜಿ ಲವರ್ ಆಗಿದ್ದ ಸುಪುತ್ರನ ಜೊತೆ ವಾಸವಾಗಿದ್ದಳು. ಈ ವಿಷಯ ಭಾಗ್ಯಶ್ರೀ ಕಿರಿಯ ಸೋದರ ಲಿಂಗರಾಜ್ ಪೂಜಾರಿಗೆ ಗೊತ್ತಾಗಿತ್ತು. ಅಕ್ಕನ ಅನೈತಿಕ ಸಂಬಂಧವನ್ನು ಲಿಂಗರಾಜ್ ವಿರೋಧಿಸಿ, ಭಾಗ್ಯಶ್ರೀ ಜೊತೆ ಜಗಳ ಮಾಡಿದ್ದನು.
2015ರಲ್ಲಿ ಕೊಲೆ: ತನ್ನ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನು ಕೊಲೆ ಮಾಡಲು ಭಾಗ್ಯಶ್ರೀ ಗೆಳೆಯನ ಜೊತೆ ಸೇರಿ ಪ್ಲಾನ್ ಮಾಡಿದ್ದಳು. 2015 ಆಗಸ್ಟ್ 11ರಂದು ಇಬ್ಬರು ಸೇರಿ ಲಿಂಗರಾಜ್ನನ್ನು ಕೊಲೆ ಮಾಡಿದ್ದರು. ಕೊಲೆಯ ನಂತರ ಶವವನ್ನು ಪೀಸ್ ಪೀಸ್ ಆಗಿ ಮಾಡಿದ್ದರು.
ಮೃತದೇಹ ಪೀಸ್ ಪೀಸ್ ಮಾಡಿದ್ದ ಜೋಡಿ
ಮೃತದೇಹದ ಅಂಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬೇರೆ ಬೇರೆ ಸ್ಥಳದಲ್ಲಿ ಎಸೆದು ಭಾಗ್ಯಶ್ರೀ ಮತ್ತು ಸುಪುತ್ರ ಬೆಂಗಳೂರು ತೊರೆದು ಮಹಾರಾಷ್ಟ್ರದ ನಾಸಿಕ್ ಸೇರಿಕೊಂಡಿದ್ದರು. ನಾಸಿಕ್ನಲ್ಲಿ ಇಬ್ಬರು ತಮ್ಮ ಹೆಸರು ಬದಲಿಸಿಕೊಂಡಿದ್ದರು. ಜಿಗಣಿ ಟೌನ್ ಸಮೀಪದ ವಿ ಇನ್ ಹೋಟೆಲ್ ಬಳಿ ಏರ್ಬ್ಯಾಗ್ ನಲ್ಲಿ ಲಿಂಗರಾಜು ಕೈ ಕಾಲು ಪತ್ತೆಯಾಗಿತ್ತು.
ಇದೀಗ ಎಂಟು ವರ್ಷದ ಬಳಿಕ ಇಬ್ಬರು ಪೊಲೀಸರ ಬಲಗೆ ಬಿದ್ದಿದ್ದಾರೆ. ಜಿಗಣಿ ಠಾಣೆ ಇನ್ಸ್ಪೆಕ್ಟರ್ ಸುದರ್ಶನ್ ಮತ್ತು ತಂಡ ಆರೋಪಿಗಳ ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.