Belagavi News In Kannada | News Belgaum

ರಾಜ್ಯದ ಜಿಲ್ಲೆಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಯುಗಾದಿ ಹಬ್ಬವನ್ನು ಧಾರ್ಮಿಕ ದಿನಾಚರಣೆ ಎಂದು ಆಚರಿಸಲು ಸೂಚನೆ

ಬೆಳಗಾವಿ : ರಾಜ್ಯದ ಜಿಲ್ಲೆಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲುಆಯುಕ್ತರಿಂದ ಜಿಲ್ಲೆಗಳಿಗೆ ಪತ್ರ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ರಾಜ ಜಿಲ್ಲಾವಾರು ‘ಎ’ ಪವರ್ಗದ ದೇವಾಲಯಗಳಲ್ಲಿ ವಿಶೇಷವಾಗಿ ಯುಗಾದಿ ಹಬ್ಬವನ್ನು ಆಚರಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು.
ಸುತ್ತೋಲೆ ದಿನಾಂಕ: 24.03.2022.ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸುತ್ತೋಲೆಯನ್ವಯ ಚಾಂದ್ರಮಾನ / ಸೌರಮಾನ ಯುಗಾದಿ ಹಬ್ಬವನ್ನು ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷವಾಗಿ ಆಚರಿಸಲು ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಿನಾಂಕ:22.03.2023 ರಂದು ಯುಗಾದಿ ಹಬ್ಬವನ್ನು ಆಚರಿಸುವ ಬಗ್ಗೆ. ಜಿಲ್ಲಾವಾರು ಪ್ರಸಿದ್ಧ 3 ದೇವಾಲಯಗಳಲ್ಲಿ ವಿಶೇಷವಾಗಿ ಪೂಜೆ, ಪ್ರಾರ್ಥನೆ, ಅಲಂಕಾರ,
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಕೆಳಕಂಡಂತೆ ನಡೆಸುವುದು. ಎಂದು ಪತ್ರದಲ್ಲಿ ತಿಳಿಸಲಾಗಿದೆ

• ದೇವಾಲಯದ ಮುಂಭಾಗದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ “ಧಾರ್ಮಿಕ ದಿನಾಚರಣೆ” ಎಂಬ ಬಗೆ, ಬ್ಯಾನರ್, ನಾಮಫಲಕ (ಬೋರ್ಡ್‌) ಅಳವಡಿಸುವುದು. ದೇವಾಲಯದ ಮುಂಭಾಗದಲ್ಲಿ ಕಮಾನಿನಲ್ಲಿ (ಆರ್ಚ್) ರೀತಿಯಲ್ಲಿ ದೇವಾಲಯದ ಹೆಸರಿನೊಂದಿಗೆ “ರಾಜ್ಯ ಧಾರ್ಮಿಕ ದಿನಾಚರಣೆ” ಎಂದು ವಿಶೇಷವಾಗಿ ನಮೂದಿಸುವುದು.

• ಧಾರ್ಮಿಕ ದಿನವನ್ನು ವಿಶೇಷವಾಗಿ ಆಚರಿಸುವ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ
ಮತ್ತು ಸ್ಥಳೀಯ (ಕೇಬಲ್) ಪ್ರಮುಖ ಮಾದ್ಯಮಗಳಲ್ಲಿ ಪ್ರಚುರಪಡಿಸುವುದು.
ದೇವಾಲಯಗಳ ಮುಂಭಾಗದ ತೆಂಗಿನ ಗರಿಗಳಿಂದ ಚಪ್ಪರ, ತಳಿರು ತೋರಣ, ಹೂವಿನ ಅಲಂಕಾರ, ಬಣ್ಣಬಣ್ಣದ ರಂಗೋಲಿ ಮುಂತಾದವುಗಳಿಂದ ಅಲಂಕರಿಸುವುದು.
ಈ ದಿನ ಬೆಳಗ್ಗೆ ದೇವರಿಗೆ ವಿಶೇಷವಾಗಿ ಸಂಕಲ್ಪಿಸಿ, ಪ್ರಾರ್ಥಿಸಿ ದೇವರಿಗೆ ವಿಶೇಷವಾಗಿ ಅಭಿಷೇಕ, ಅಲಂಕಾರ, ಪೂಜೆಯೊಂದಿಗೆ ಬೇವು, ಬೆಲ್ಲ ವಿತರಿಸುವುದು.

• ಪ್ರಸಿದ್ಧ ಜ್ಯೋತಿಷಿಯವರುಗಳಿಂದ ಪಂಚಾಂಗ ಶ್ರವಣ ಮಾಡಿಸುವುದು ಪೂಜೆಯ

ನಂತರ ಸಿಹಿ. ಪ್ರಸಾದಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಹಂಚುವುದು. • ದೇವಾಲಯಗಳಲ್ಲಿ ಬೆಳಗ್ಗೆ, ಸಂಜೆ ಹರಿಕಥೆ, ಭಜನೆ,ಪ್ರಾರ್ಥನೆ, ಸುಗಮ ಸಂಗೀತ, ಭರತನಾಟ್ಯ ಮತ್ತು ಮುಂತಾದ ಸ್ಥಳೀಯವಾಗಿ ಲಭ್ಯವಾಗುವ ಸಾಂಸ್ಕೃತಿಕ

ಕಾರ್ಯಕ್ರಮಗಳನ್ನು ನಡೆಸುವುದು.

• ಕನಿಷ್ಠ 5 ಬೇವಿನ ಸಸಿ (ಬಿಲ್ವ ಅಥವಾ ಸೂಕ್ತ ಗಿಡಗಳನ್ನು ನೆಡಲು ಸೂಕ್ತ ವ್ಯವಸ್ಥೆ

ಮಾಡಿಸುವುದು.

ಸ್ಥಳೀಯ ಮಾನ್ಯ ಶಾಸಕರು ಮತ್ತು ಪ್ರತಿನಿಧಿಗಳು ರವರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸುವುದು.

ಈ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸುವ ಬಗೆ ಹೆಚ್ಚು ಹೆಚ್ಚು ಭಕ್ತರು

ದೇವಾಲಯಕ್ಕೆ ಆಗಮಿಸುವಂತೆ ವ್ಯವಸ್ಥೆ ಮಾಡುವುದು. • ದೇವಾಲಯದ ಸಮೀಪವಿರುವ ವಿವಿಧ ಧರ್ಮಗಳ ಮಠಾಧೀಕರುರನ್ನು ಆಹ್ವಾನಿಸಿ, ಅವರಿಂದ ಯುಗಾದಿ ಹಬ್ಬದ ಬಗ್ಗೆ ಭಕ್ತರಿಗೆ ಪ್ರವಚನ ಮಾಡಿಸಿ

ಶ್ರೀ ಶ್ರೀಗಳವರಿಂದ ಆಶೀರ್ವಾದ ಮಾಡಿಸುವ ವ್ಯವಸ್ಥೆ ಕಲ್ಪಿಸುವುದು.

ಈ ಕಾರ್ಯಕ್ರಮಗಳನ್ನು ನಡೆಸುವ ಸಲುವಾಗಿ ಸ್ವಯಂ ಸೇವಕ ಸಂಘ ಸಂಸ್ಥೆಗಳ

ಸಹಾಯ ನಡೆದುಕೊಳ್ಳುವುದು.

• ಯುಗಾದಿ ಹಬ್ಬವು ವರುಷದ ಮೊದಲ (ಅದಿಯ) ದಿನವಾಗಿರುವುದರಿಂದ, ಈ ದಿನ ಸಂಜೆ 4 ರಿಂದ 6.30 ಗಂಟೆಯೊಳಗೆ ಗೋದೂಳಿ ಲಗ್ನದಲ್ಲಿ ಹಸುಗಳಿಗೆ /ಎತ್ತುಗಳಿಗೆ ಮತ್ತು ಉಳುಮೆ ಮಾಡುವ ನೇಗಿಲು, ನೊಗ (ರೈತನು ಉಳುಮೆ ಮಾಡುವ ಸಲಹ ಸಕರಣೆಗಳು) ಗಳನ್ನು ವಿಶೇಷವಾಗಿ ಪೂಜಿಸಿ, ಅಲಂಕರಿಸಿ ಹೊಸದಾಗಿ ಉಳುಮ ಪ್ರಾರಂಭಿಸಲು ” ಹೊನ್ನಾರು ” ಮಾಡಲು ಹತ್ತಾರು ಜೋಡಿ ಹಸುಗಳು/ಎತ್ತುಗಳು ನೇಗಿಲು, ರೈತ ಮುಂತಾದವುಗಳ ವ್ಯವಸ್ಥೆಯನ್ನು ಮಾಡಿ ಸಾಲಾಗಿ ಸಾಲಾಗಿ ಉಳುಮೆ ಮಾಡುವ ವ್ಯವಸ್ಥೆ ಮಾಡುವುದು, • ಸದರಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳರವರ ಗ್ರಾಮಸ್ಥರ, ಭಕ್ತರ ಸಹಕಾರದೊಂದಿಗೆ ನಡೆಸುವುದು.

ಈ ಮೇಲ್ಕಂಡ ಕಾರ್ಯಕ್ರಮಗಳನ್ನು ನಡೆಸುವ ಬಗೆ, ದೇವಾಲಯದಲ್ಲಿ, ಯುಗಾದಿಯಂದು ಭೂಮಿಯನ್ನು ಉಳುಮೆ ಮಾಡಲು ಹೊನ್ನಾರು ವ್ಯವಸ್ಥೆ ಮಾಡುವ ಬಗ್ಗೆ ಆಯಾಯಾ ದೇವಾಲಯಗಳ ಸಮೀಪ ಉಳುಮೆಗೆ ಭೂಮಿ, ರೈತ ನೇಗಿಲು ಮುಂತಾದವುಗಳ ಲಭ್ಯತೆಯನ್ನು ತಿಳಿದು, ಈ ಮೇಲ್ಕಂಡ ಕಾರ್ಯಕ್ರಮಗಳನ್ನು ದೇವಾಲಯಗಳಲ್ಲಿ ವಿಶೇಷವಾಗಿ ಆಚರಿಸಿ ಯಶಸ್ವಿಗೊಳಿಸಲು ಹಾಗೂ ಇದಲ್ಲದೇ ಅವಶ್ಯಕವಿದ್ದಲ್ಲಿ ಇತರ ಸೃಜನ ಶೀಲಾ ಶಕ್ತಿಯನ್ನು ಬಳಸಿಕೊಂಡು ಇತರೆ ಕಾರ್ಯಕ್ರಮಗಳನ್ನು ಕೂಡ ನಡೆಸಿ, ಸದರಿ ಕಾರ್ಯಕ್ರಮಗಳನ್ನು ನಡೆಸಿದ ಬಗ್ಗೆ ಚಿಕ್ಕದಾಗಿ ವಿಡಿಯೋ ಮತ್ತು ಭಾವಚಿತ್ರ ಮಾಡಿ ತಪ್ಪದೇ ಕೇಂದ್ರ ಕಛೇರಿಗೆ ಕಳುಹಿಸಲು ಆಯುಕ್ತರ ಪತ್ರದಲ್ಲಿ ತಿಳಿಸಿದ್ದಾರೆ