ಹಳಕಟ್ಟಿ ಭವನದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದ ಶಾಸಕ ಅನಿಲ ಬೆನಕೆ

ಬೆಳಗಾವಿ 19 :ದಿನಾಂಕ 19.03.2023 ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಶಾಸಕರ ಸ್ಥಳೀಯ ಪ್ರದೇಶಾಭಿವೃಧ್ದಿ ನಿದಿಯಡಿಯಲ್ಲಿ ಮಹಾಂತೇಶ ನಗರದ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಕೈಗೊಂಡಿರುವ ಅಭಿವೃಧ್ದಿ ಕಾಮಗಾರಿಗಳನ್ನು ಇಂದು ಕಾರಂಜಿ ಮಠದ ಶ್ರೀ. ಶ್ರೀ. ಗುರುಸಿದ್ದ ಸ್ವಾಮಿಜಿಗಳ ದಿವ್ಯ ಸಾನಿದ್ಯದಲ್ಲಿ ಹಾಗೂ ಲಿಂಗಾಯತ ಸಂಘಟನೆಯ ಮುಖಂಡರುಗಳೊಂದಿಗೆ ಮತ್ತು ನಗರ ಸೇವಕರುಗಳೊಂದಿಗೆ ಲೋಕಾರ್ಪಣೆಗೊಳಿಸಿದರು.
ಹೌದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ರವರು ಸಮಾಜದ ಮುಖಂಡರುಗಳ ಹಲವಾರು ವರ್ಷಗಳ ಬೇಡಿಕೆಯನ್ವಯ ಮಹಾಂತೇಶ ನಗರದ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಅಗತ್ಯ ಸೌಲಭ್ಯಗಳಾದ ಪ್ರಾರ್ಥನಾ ಮಂದಿರದ ಆವರಣ ಗೋಡೆ, ಶೌಚಾಲಯ, ಆವರಣದಲ್ಲಿ ಪೇವರ್ಸ ಅಳವಡಿಕೆ, ಲಿಂಗಾಯತ ಸಂಘಟನೆಯ ಕಚೇರಿ, ಅಡುಗೆ ಕೋಣೆ, ಭದ್ರತಾ ಸಿಬ್ಬಂದಿ ಕೋಣೆ, ಅಲಂಕಾರಿಕ ವಿದ್ಯುತ ದೀಪ ಹಾಗೂ ಇತರ ಕಾಮಗಾರಿಗಳನ್ನು ತಮ್ಮ ಶಾಸಕರ ಸ್ಥಳೀಯ ಪ್ರದೇಶಾಭಿವೃಧ್ದಿ ನಿಧಿಯಡಿಯಲ್ಲಿ ಕೈಗೊಂಡು ಇಂದು ಅವುಗಳನ್ನು ಲೋಕಾರ್ಪಣೆಗೊಳಿಸಿದರು. ಶಾಸಕರ ಅಭಿವೃದ್ದಿಗೆ ಎಲ್ಲ ಲಿಂಗಾಯತ ಸಂಘಟನೆಯ ಮುಖಂಡರುಗಳು ಹಾಗು ಪದಾಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಕಾರಂಜಿ ಮಠದ ಶ್ರೀ. ಶ್ರೀ. ಗುರುಸಿದ್ದ ಸ್ವಾಮಿಜಿಗಳು, ಹಿರೇಮಠದ ಸ್ವಾಮಿಜಿಗಳು, ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ, ಶಂಕರ ಗುಡಸ, ನಗರ ಸೇವಕರುಗಳಾದ ರಾಜಶೇಖರ ಢೋಣಿ, ಹಣಮಂತ ಕೊಂಗಾಲಿ, ವೀಣಾ ವಿಜಾಪೂರೆ ಇದ್ದರು ಹಾಗೂ ಶಿವನಗೌಡಾ ಪಾಟೀಲ ಮತ್ತು ನೂರಾರು ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.