Belagavi News In Kannada | News Belgaum

ವಿದ್ಯುತ್ ತಗುಲಿ ತಾಯಿ-ಇಬ್ಬರು ಮಕ್ಕಳು ಸಾವು

ಕಲಬುರಗಿ: ವಿದ್ಯುತ್ ತಗುಲಿದ ಪರಿಣಾಮ ತಾಯಿ ಸೇರಿದಂತೆ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿಯ ಚಿಂಚೋಳಿ ಪಟ್ಟಣದ ಧನಗರಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ನಿವಾಸಿಗಳಾದ ತಾಯಿ ಝರಣಮ್ಮ (45), ಮಕ್ಕಳಾದ ಸುರೇಶ್ (22) ಹಾಗೂ ಮಹೇಶ್ (20) ಮೃತ ದುರ್ದೈವಿಗಳು. ಸರ್ವಿಸ್ ವೈರ್ ಕಡಿದು ನೆಲಕ್ಕೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದ್ದು, ತಾಯಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.