Belagavi News In Kannada | News Belgaum

ಅನುಭವ ಮಂಟಪದ ನಿರ್ಮಾಣಕುರಿತು ಲಿಂಗಾಯತ ಸಮಾಜದ ಮುಖಂಡರುಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಶಾಸಕ ಅನಿಲ ಬೆನಕೆ


ಬೆಳಗಾವಿ,ಅನುಭವ ಮಂಟಪದ ನಿರ್ಮಾಣಕುರಿತು ಲಿಂಗಾಯತ ಸಮಾಜದ ಮುಖಂಡರುಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಶಾಸಕ ಅನಿಲ ಬೆನಕೆ
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರ ಕಣಸಿನ ಯೋಜನೆಯಾದ ಬೆಳಗಾವಿಯಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುವಕುರಿತು ಪ್ರಮುಖ ಪರಿನಿತರು ಸಂಶೋಧನೆ ನಡೆಸಿ ಹಲವಾರು ಬಸವ ಶರಣರಅಭಿಪ್ರಾಯ ಸಂಗ್ರಹ ಮಾಡಿಅನುಭವ ಮಂಟಪವನ್ನುನಿರ್ಮಾಣ ಮಾಡುವಕುರಿತುಲಿಂಗಾಯತ ಸಮಾಜದ ಮುಖಂಡರುಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಿದರು. ಬೆಳಗಾವಿ ನಗರದಮಾಳ ಮಾರುತಿ ಬಡಾವಣೆಮಹಾಂತೇಶ ನಗರದಲ್ಲಿಅನುಭವ ಮಂಟಪವನ್ನು ನಿರ್ಮಿಸಲು ಸಜ್ಜಾಗಿದ್ದು,ಬೆಳಗಾವಿ ನಗರದ ಬಸವಾದಿ ಶರಣರಅಭಿಪ್ರಾಯ ಸಂಗ್ರಹ ಮಾಡಿಎಲ್ಲಗೊಂದಲಗಳ ನಿವಾರಣೆಆದ ಬಳಿಕ ಅನುಭವ ಮಂಟಪದ ಒಳಾಂಗಣ ಕಾಮಗಾರಿಗೆಚಾಲನೆ ನೀಡಲಾಗುವುದುಎಂದು ಸಭೆಯಲ್ಲಿ ತಿಳಿಸಿದರು. ಅನುಭವ ಮಂಟಪದ ಸ್ಥಾಪನೆಯಅಡಿಗಲ್ಲು ಸಮಾರಂಭವನ್ನುನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪಾಜಿರವರು ನೆರವೇರಿಸಲಿದ್ದಾರೆಎಂದು ಮಾಹಿತಿ ನೀಡಿದರು.
ಅನುಭವ ಮಂಟಪದ ನಿರ್ಮಾಣದಕುರಿತು ಬೆಳಗಾವಿ ಜನತೆಯುಅಗತ್ಯ ಸಲಹೆ ಸೂಚನೆಗಳನ್ನು ನೀಡಲು ಶಾಸಕರಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದರು.