ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕಾರ್ಯ ಶ್ಲಾಘನೀಯ

ಬೈಲಹೊಂಗಲ: ಉಚಿತ ಟ್ಯೂಷನ್ ಕ್ಲಾಸ್ ಮೂಲಕ ಬಡ ಮಕ್ಕಳ ಶಿಕ್ಷಣದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಿಕ್ಷಣ ಪ್ರೇಮಿ, ಸಹಕಾರ ಭಾರತಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ ನಲವಡೆ ನುಡಿದರು.
ಅವರು ತಾಲೂಕಿನ ನಯಾನಗರದ ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಉಚಿತ ಟ್ಯೂಷನ್ ಕ್ಲಾಸ್ ಮೂರು ತಿಂಗಳಿಂದ ನಮ್ಮ ಸರಕಾರಿ ಪ್ರೌಢ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿ ಅವರಿಗೆ ಗೌರವಧನ ನೀಡಿ ಮಕ್ಕಳ ಜಾÐನದ ಹಸಿವು ಇಂಗಿಸಲು ಮತ್ತು ಬಡ ಮಕ್ಕಳನ್ನು ಜ್ಞಾನದ ಬಲದಿಂದ ಉನ್ನತ ನಾಕರೀಕರನ್ನಾಗಿ ಮಾಡಲು, ಸಮಾಜದ ಮುಖ್ಯವಾಹಿನಿಯಲ್ಲಿ ತರಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯರು ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಡಿಯಲ್ಲಿ ಶ್ರಮಿಸುತ್ತಿರುವ ಕಾಂiÀರ್i ದೇವರು ಕೂಡಾ ಮೆಚ್ಚುವಂತಹದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢ ಶಾಲಾ ಮುಖ್ಯೋಪಾದ್ಯಾಯ ನಾಗೇಶ ಮಾಳನ್ನವರ ಹಾಗೂ ಅತಿಥಿಗಳಾಗಿದ್ದ ಸಂಸ್ಥೆಯ ವಲಯ ಮೆಲ್ವಿಚಾರಕ ನಾಗರಾಜು ಮಾತನಾಡಿ ಶಾಲೆಯ ಮಕ್ಕಳಿಗೆ ಜ್ಞಾನ ದಾಸೋಹ ಗೈದ ಶಿಕ್ಷಕ ಅದೃಷ್ಯ ಕುರಬೇಟ ಇವರ ಪ್ರಾಮಾಣಿಕ ಸೇವೆ ಅನುಕರಣೀಯ ಎಂದರು. ಇದೆ ಸಂದರ್ಭದಲ್ಲಿ ಗಣಿತ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಕಿರ್ತನಾ ಪೂಜೇರ, ದ್ವಿತೀಯ ನಾಗರಾಜ ಸಂಕನ್ನವರ, ತೃತಿಯ ಸಂಪತ್ತಕುಮಾರ ಬಡಿಗೆರ ಇವರಿಗೆ ನೆನಪಿನ ಕಾಣಿಕೆ ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಲೇಖನಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಎಲ್ಲಾ ಬಹುಮಾನಗಳನ್ನು ನೀಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಹಲ್ಕಿ, ಕಿರು ತೆರೆ ಕಲಾವಿದ ದಾನೇಶ ಕುಮಾರ ಮೋದಗಿ, ಪ್ರತಿನಿಧಿ ಹುಸೇನಬಿ ನದಾಪ, ಸುನಿತಾ ಅಗಸಿಬಾಗಿಲ ಮಕ್ಕಳು ಮುಂತಾದವರು ಉಪಸ್ಥಿತರಿದ್ದರು.
ಹತ್ತನೆಯ ತಗತಿಯ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು. ಕು.ರಕ್ಷಿತಾ ಅಸುಂಡಿ ಸ್ವಾಗತಿಸಿದರು, ಕು.ಕಿರ್ತನಾ ಪೂಜೇರ ನಿರೂಪಿಸಿದರು, ಕು.ತಾಯಮ್ಮಾ ಉಗರಖೋಡ ವಂದಿಸಿದರು.