Belagavi News In Kannada | News Belgaum

ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಮೂರು ದಿನಗಳ ನಾಟಕೋತ್ಸವ

 

ಬೆಳಗಾವಿ:22:ಮಾರ್ಚ: ಬೆಳಗಾವಿ ರಂಗಸಂಪದವು ಮಾರ್ಚ 27 ರಂದು ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ದಿ:25-03-2023 ರಿಂದ 27-03-2023 ರ ವರೆಗೆ ನಗರದ ಲೋಕಮಾನ್ಯ ರಂಗಮಂದಿರದಲ್ಲಿ ಮೂರು ದಿನಗಳ ಕಾಲ ದಿ.ಶಿವಕುಮಾರ ಸಂಬರಗಿಮಠ ನಾಟಕೋತ್ಸವವನ್ನು ಭಾರತೀಯ ಜೀವ ವಿಮಾ ನಿಗಮ ಬೆಳಗಾವಿ ವಿಭಾಗ ಇವರ ಪ್ರಾಯೋಜನೆಯಲ್ಲಿ ಹಮ್ಮಿಕೊಂಡಿದೆ ಎಂದು ರಂಗಸಂಪದ ಅಧ್ಯಕ್ಷರಾದ ಶ್ರೀ.ಅರವಿಂದ ಕುಲಕರ್ಣಿ ತಿಳಿಸಿದರು.
ಅವರು ಇಂದು ನಗರದ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತÀನಾಡುತ್ತ ದಿನಾಂಕ:25-03-2023 ರಂದು ಲೇಖಕರಾದ ಶ್ರೀಮತಿ ವಿನುತಾ ಹಂಚಿನಮನಿ, ಧಾರವಾಡ ರಂಗರೂಪ ಮತ್ತು ನಿರ್ದೇಶನ ಡಾ.ಅರವಿಂದ ಕುಲಕರ್ಣಿ ಅವರ “ಪಂಚಕನ್ಯ ಸ್ಮರೇ ನಿತ್ಯಂ” ನಾಟಕ ಮತ್ತು ದಿ:26-03-2023 ರಂದು ಶ್ರೀ.ರಾಜೇಂದ್ರ ಕಾರಂತ, ರಂಗರೂಪ ಮತ್ತು ನಿರ್ದೇಶನ ಡಾ.ಅರವಿಂದ ಕುಲಕರ್ಣಿ ಅವರ “ಮುದ್ದಣ್ಣನ ಪ್ರಮೋಷನ್ ಪ್ರಸಂಗ” ಸಾಮಾಜಿಕ ಹಾಸ್ಯ ನಾಟಕ ಹಾಗೂ ದಿನಾಂಕ:27-03-2023 ರಂದು ರಂಗರೂಪ/ವಿನ್ಯಾಸ/ನಿರ್ದೇಶನ ಶ್ರೀ.ರಾಜಗುರು ಹೊಸಕೋಟೆ ಅವರ ಫೂಲನದೇವಿ ಜೀವನ ಆಧಾರಿತ ನಾಟಕ “ಫೂಲನ ದೇವಿ” ನಾಟಕಗಳು ನಗರದ ಲೋಕಮಾನ್ಯ ರಂಗ ಮಂದಿರದಲ್ಲಿ ಮೂರು ದಿನಗಳ ಕಾಲ ಸಂಜೆ 6.00ಕ್ಕೆ ಪ್ರದರ್ಶನಗೊಳ್ಳಲಿವೆ ಎಂದರು.
ಪ್ರತಿ ವರ್ಷ ರಂಗಸಂಪದ ನೀಡುವ “ರಂಗಸಖ” ಪ್ರಶಸ್ತಿಯನ್ನು 2023ರ ಸಾಲಿಗೆ ರಂಗಕರ್ಮಿ ಧಾರವಾಡ ಅಭಿನಯ ಭಾರತಿಯ ಅಧ್ಯಕ್ಷರಾದ ಶ್ರೀ.ಅರವಿಂದ ಕುಲಕರ್ಣಿ ಅವರಿಗೆ ನೀಡಲಾಗುತ್ತಿದೆ. ಅಲ್ಲದೆ ಅಂದು ಹಿರೀಯ ಕಲಾವಿದರಾದ ಶ್ರೀ.ರಮೇಶ ಅನಿಗಳ ಹಾಗೂ ಶ್ರೀ.ಗಂಗಾಧರ ಬೆನ್ನೂರು, ಇವರುಗಳಿಗೆ ಸನ್ಮಾನ ಮಾಡಲಾಗುವದು ಎಂದರು.
ಅಂದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಜೀವ ವಿಮಾ ನಿಗಮ, ಬೆಳಗಾವಿ ಹಿರಿಯ ವಿಭಾಗಾಧಿಕಾರಿಗಳಾದ ಶ್ರೀ.ಅಜೀತ ವಾರಕರಿ ಆಗಮಿಸಲಿದ್ದು, ಹಿರಿಯ ನ್ಯಾಯವಾದಿಗಳು ಹಾಗೂ ರಂಗಸಂಪದ ಪೋಷಕರಾದ ಶ್ರೀ.ಎಸ್.ಎಂ.ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಂಗಸಂಪದ ಗೌರವಾಧ್ಯಕ್ಷರಾದ ರಂಗಕರ್ಮಿ ಶ್ರೀಪತಿ ಮಂಜನಬೈಲು ಉಪಸ್ಥಿತರಿರುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಸಂಪದ ಅಧ್ಯಕ್ಷರಾದ ಡಾ.ಅರವಿಂದ ಕುಲಕರ್ಣಿ, ಕಾರ್ಯದರ್ಶಿಗಳಾದ ಪ್ರಸಾದ ಕಾರಜೋಳ, ಉಪಾಧ್ಯಕ್ಷರಾದ ರಾಮಚಂದ್ರ ಕಟ್ಟಿ, ಗುರುನಾಥ ಕುಲಕರ್ಣಿ, ಕೋಶಧ್ಯಕ್ಷರಾದ ದಲೀಪ ಮಳಗಿ, ಸದಸ್ಯರಾದ ಅಶೋಕ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.