ಅಬಕಾರಿ ಇಲಾಖೆಯಿಂದ 158 ಲೀಟರ್ ಗೋವಾ ಮದ್ಯ ವಶ.

ಅನಮೋಡ ಅಬಕಾರಿ ಇಲಾಖೆಯಿಂದ 158 ಲೀಟರ್ ಗೋವಾ ಮದ್ಯ ವಶ. ಅಬಕಾರಿ ಜಂಟಿಆಯುಕ್ತರು ಮಂಗಳೂರು ವಿಭಾಗ ಮಂಗಳೂರು. ಹಾಗೂ ಮಾನ್ಯ ಜಗದೀಶ ಎನ್ ಕೆ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದ ಮೇರೆಗೆ ಹಾಗೂ ಶ್ರೀ ಶಂಕರಗೌಡ ಪಾಟೀಲ ಮಾನ್ಯ ಅಬಕಾರಿ ಉಪ ಅಧೀಕ್ಷಕರು ಯಲ್ಲಾಪುರ ಉಪವಿಭಾಗ ಯಲ್ಲಾಪುರ ರವರ ಮಾರ್ಗದರ್ಶನ ಮೇರೆಗೆ ದಿನಾಂಕ. 21/03/ 2023 ರಂದು ಬೆಳಿಗ್ಗೆ 9:30 ಗಂಟೆ ಸಮಯಕ್ಕೆ ಜೋಯಿಡಾ ತಾಲೂಕಿನ ಅನಮೋಡ ಗ್ರಾಮದ ಅಬಕಾರಿ ತನಿಖಾ ಠಾಣೆಯ ಮುಂಭಾಗದಲ್ಲಿ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣಿ ಮಾಡುತ್ತಿದ್ದಾಗ ನೋಂದಣಿ ಸಂಖ್ಯೆ
GJ 01 DU 0522 ದರಲ್ಲಿ 158.400 ಲೀಟರ್ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಫಿರೋಜ ಹಾಜಿಭಾಯಿ ಬ್ಲೋಚ ,ಜುನಾಗಢ ಗುಜರಾತ ಎಂಬುವನನ್ನು ದಸ್ತಗಿರಿ ಮಾಡಲಾಗಿದ್ದು ವಾಹನ ಮಾಲೀಕನನ್ನು ಪತ್ತೆ ಹಚ್ಚಬೇಕಾಗಿದೆ. ಅಬಕಾರಿ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ರಾದ
ಶ್ರೀ ಶ್ರೀಕಾಂತ ಬಿ ಅಸೂದೆ
ಅಬಕಾರಿ ಪೇದೆಗಳಾದ
ಶ್ರೀ ಬಾಲಕೃಷ್ಣ ಕೆ
ಶ್ರೀ ಆರ್ ಎನ್ ನಾಯಕ
ಶ್ರೀ ಯು ಎನ್ ತುಳಜಿ
ಪಾಲ್ಗೊಂಡಿರುತ್ತಾರೆ. ಅಬಕಾರಿ ಸ್ವತ್ತು ಹಾಗೂ ವಾಹನದ ಅಂದಾಜು ಮೌಲ್ಯ 564800/- ಆಗಿರುತ್ತದೆಎಂದು ಅಂದಾಜಿಸಲಾಗಿದೆ. ತನಿಖೆಯನ್ನು ಮುಂದುವರಿಸಲಾಗಿದೆ. ವರದಿ ಬ್ರಹ್ಮಾನಂದ ಪತ್ತಾರ.