ಸರ್ಕಾರದ ಯೋಜನೆಯಡಿ ಯುಗಾದಿ ಹಬ್ಬದ ದಿನದಂದು ಯುವಕರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿದ ಶಾಸಕ ಅನಿಲ ಬೆನಕೆ

ಸರ್ಕಾರದ ಯೋಜನೆಯಡಿ ಯುಗಾದಿ ಹಬ್ಬದ ದಿನದಂದು ಯುವಕರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿದ ಶಾಸಕ ಅನಿಲ ಬೆನಕೆ :
ಬೆಳಗಾವಿ 22 :ದಿನಾಂಕ 22.03.2023 ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಸರ್ಕಾರದ ಯೊಜನೆಯಾದ ದ್ವಿಚಕ್ರ ವಾಹನ ಸರಕು ಸಾಗಾಣ ಕೆ ಯೋಜನೆಯಡಿಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಮಹರ್ಷಿ ವಾಲ್ಮಿಕಿ ಅಭಿವೃಧ್ದಿ ನಿಗಮ, ಡಾ. ಬಿ. ಆರ್. ಅಂಬೇಡ್ಕರ ಅಭಿವೃಧ್ದಿ ನಿಗಮ, ತಾಂಡಾ ಅಭಿವೃಧ್ದಿ ನಿಗಮ, ಬೋವಿ ಅಭಿವೃಧ್ದಿ ನಿಗಮ ಹಾಗೂ ಆದಿಜಾಂಬವ ಅಭಿವೃಧ್ದಿ ನಿಗಮದ ವತಿಯಿಂದ ಒಟ್ಟು 80 ವಾಹನಗಳ ಪೈಕಿ ಇಂದು ಕರ್ನಾಟಕ ಮಹರ್ಷಿ ವಾಲ್ಮಿಕಿ ಅಭಿವೃದಿದ ನಿಗಮದ ಫಲಾನುಭವಿಗಳಿಗೆ 20 ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಿದರು.
ವಾಹನಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದ ಶಾಸಕರು ಈ ಯೋಜನೆಯು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸಮುದಾಯದ ಯುವಕರಿಗೆ ಒಳ್ಳೆಯ ಯೊಜನೆಯಾಗಿದ್ದು, ಇದರಲ್ಲಿ ಪ್ರತಿಶತ 70 ರಷ್ಟು ಸಹಾಯಧನ ಸಿಗುತ್ತಿರುವುದರಿಂದ ಬಡ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಒಳ್ಳೆಯ ಅವಕಾಶವನ್ನು ಸರ್ಕಾರವು ಮಾಡಿಕೊಟ್ಟಿದೆ ಎಂದು ಹೇಳಿದರು. ಈ ಯೋಜನೆಯಲ್ಲಿ ದ್ವಿಚಕ್ರ ವಾಹನವನ್ನು ಪಡೆದುಕೊಂಡಿರುವ ಫಲಾನುಭವಿಗಳು ವಾಹನಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಅದರಂತೆಯೇ ಡಾ. ಬಿ. ಆರ್. ಅಂಬೇಡ್ಕರ ಅಭಿವೃಧ್ದಿ ನಿಗಮದ ವತಿಯಿಂದ ಪರಿಶಿಷ್ಠ ಜಾತಿ ಸಮುದಾಯದ ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ಒಟ್ಟಾರೆಯಾಗಿ ಮತಕ್ಷೇತ್ರದಲ್ಲಿ 80 ದ್ವಿಚಕ್ರ ವಾಹನಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಬಸಪ್ಪ ಚಿಕ್ಕಲದಿನ್ನಿ ಮಾತನಾಡಿ ಶಾಸಕರು ಅಭಿವೃದ್ದಿಯ ಜೊತೆಗೆ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಮಹರ್ಷಿ ವಾಲ್ಮಿಕಿ ಅಭಿವೃಧ್ದಿ ಯೋಜನೆಯಡಿ ಇಂದು 20 ಬೈಕ್‍ಗಳನ್ನು ಯುಗಾದಿ ಹಬ್ಬದ ದಿನದಂದು ಯುವಕರಿಗೆ ವಿತರಿಸಿದ್ದು ಎಲ್ಲರಿಗೂ ತುಂಬಾ ಸಂತೋಷವಾಗಿದ್ದು, ಸಮಾಜದ ಎಲ್ಲರ ಪರವಾಗಿ ಶಾಸಕರಿಗೆ ಧನ್ಯವಾದಗಳನ್ನು ತಿಳಿಸಿದರು. ಎಂದರು. ನಂತರದಲ್ಲಿ ಫಲಾನುಭವಿಗಳು ಮಾತನಾಡಿ ನಮ್ಮ ಉತ್ತರ ಶಾಸಕರು ನಮಗೆ ಬೈಕ್‍ಗಳನ್ನು ವಿರಿಸುತ್ತಿರುವುದು ಬಹಳ ಸಂತಸವಾಗಿದೆ ಎಂದು ಶಾಸಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮಿಕಿ ನಿಗಮ ಹಾಗೂ ಡಾ, ಬಿ. ಆರ್. ಅಂಬೇಡ್ಕರ ನಿಗಮದ ಅಧಿಕಾರಿಗಳು, ಫಲಾನುಭವಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.