Belagavi News In Kannada | News Belgaum

ಕಲ್ಲೂರ :  ಮಾರ್ಚ್ 25 ರಂದು ಜಂಗಿ ನಿಕಾಲಿ ಕುಸ್ತಿ

 

ಧಾರವಾಡ : ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಈ ತಿಂಗಳ 25 ರಂದು ಶೋಭಕೃತ ನಾಮ ಸಂವತ್ಸರದ ಚೈತ್ರಮಾಸ ಯುಗಾದಿ ಪ್ರತಿಪದ ಹಬ್ಬದ ಪ್ರಯುಕ್ತ ಶ್ರೀ ಗ್ರಾಮದೇವಿ ಉಡಚಮ್ಮದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಪ್ರಸಿದ್ಧ ಪೈಲವಾನರ ಭಾರಿ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

ಹದಿಮೂರು ವರ್ಷಗಳಿಂದ ಯಶಸ್ವಿಯಾಗಿ ಪ್ರಸಿದ್ಧ ಪೈಲವಾನರ ಭಾರಿ ಜಂಗಿ ನಿಕಾಲಿ ಕುಸ್ತಿ ಆಯೋಜಿಸುತ್ತಾ ಬಂದಿರುವ ಕಲ್ಲೂರಿನ ಜೈ ಹನುಮಾನ್ ಕುಸ್ತಿ ಸಂಘ ಈ ಕುಸ್ತಿ ಪಂದ್ಯಾಟ ವ್ಯವಸ್ಥೆ ಮಾಡಿದೆ. ಭಾಗವಹಿಸುವ ಕುಸ್ತಿ ಪಟುಗಳಿಗೆ ಆಕರ್ಷಕ ಬಹುಮಾನಗಳಿರುತ್ತವ. ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಲ್ಲೂರ ಗ್ರಾಮದ ಕುವೆಂಪು ಶತಮಾನೋತ್ಸವ ಮಾದರಿ ಶಾಲಾ ಮೈದಾನದಲ್ಲಿ ಅಂದು ಮಧ್ಯಾಹ್ನ 3 ಗಂಟೆಯಿಂದ ಕೂಟ ಆಯೋಜಿಸಲಾಗುತ್ತಿದೆ ವಿಶೇಷವಾಗಿ ಮಹಾರಾಷ್ಟ್ರದ ಕುರಂದ್ವಾಡ ಹಲಗಿ ವಾದನ ಆಯೋಜಿಸಲಾಗಿದೆ  ಎಂದು ಸಂಘಟಕರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಉಪ ಮಹಾರಾಷ್ಟ್ರ ಕೇಸರಿ ರಾಷ್ಟ್ರೀಯ ಚಾಂಪಿಯನ್ ಸಿಕಂದರ ಶೇಖ್ ಸೊಲ್ಲಾಪುರ, ಪಂಜಾಬ್ ರಾಷ್ಟ್ರಮಟ್ಟದ ಕುಸ್ತಿಪುಟ ಪ್ರವೀಣ್ ಭೋಲಾ, ಪಂಜಾಬ್ ರಾಷ್ಟ್ರೀಯ ಪದಕ ವಿಜೇತ ನವೀನ ಕುಮಾರ, ಕರ್ನಾಟಕ ಕೇಸರಿ ನಾಗರಾಜ ಬಸಡೋಣಿ, ದಯಾನಂದ ಶಿರಗಾಂವ್, ನಾಗರಾಜ ತಡಸಿನಕೊಪ್ಪ, ಶ್ರೀಕಾಂತ ಕೋಟೆ, ಮಹಾಂತೇಶ ದೊಡವಾಡ, ಅಜಯ ಹುಬ್ಬಳ್ಳಿ, ಆದಿತ್ಯ ಕಾಗವಾಡ, ಮಹೇಶಗೌಡ, ಪರಶುರಾಮ ಬಮ್ಮನಳ್ಳಿ, ಮಹೇಶ್ ಬಿರ್ಜೆ, ಕೃಣಾ, ಕೆ.ದ್ರುವ, ಬಸರವಾಜ ಯಲಗಿನಕೊಪ್ಪ, ನಿಂಗಪ್ಪ ಕಲ್ಲೂರ, ಸಮರ್ಥ ಹಡಪದ್  ಕಲ್ಲೂರ, ಲಕ್ಷ್ಮೀ ಪಾಟೀಲ, ಶ್ವೇತಾ ಹನ್ನಿಕೇರಿ, ಮತ್ತಿತರರು ಭಾಗವಹಿಸುವರು ಎಂದು ವಿವರಿಸಿದ್ದಾರೆ.

ಅಂತರರಾಷ್ಟ್ರೀಯ ಕುಸ್ತಿಪಟು ರತ್ನಕುಮಾರ್ ಆರ್. ಮಠಪತಿ, ರಫೀಕ್ ಹೋಳಿ, ಶಿವು ಹಿರೇಮಠ ಮಾಜಿ ಮಹಾಪೌರರು ಹಾಗೂ ಕ್ರೀಡಾಪಟುಗಳ  ಪ್ರೋತ್ಸಾಹಕರು, ಕಲ್ಲೂರು ಗ್ರಾಮದ ಮಾಜಿ ಮತ್ತು ಹಾಲಿ ಸೈನಿಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ.

ಶಾಸಕ ಅಮೃತ ದೇಸಾಯಿ, ಶಿವಲೀಲಾ ವಿನಯ ಕುಲಕರ್ಣಿ, ಮಾಜಿ ಶಾಸಕಿ ಸೀಮಾ ಅಶೋಕ್ ಮಸೂತಿ, ತವನಪ್ಪ ಅಷ್ಟಗಿ, ಈರೇಶ ಅಂಚಟಗೇರಿ, ಸವಿತಾ  ಅಮರಶೆಟ್ಟಿ, ನಿಜನಗೌಡ ಪಾಟೀಲ, ಪಾಂಡುರಂಗ ನೀರಲಕೇರಿ, ಅಂಜುಮಾನ್ ಇಸ್ಲಾಂ ಸಂಸ್ಥೆ ಮಾಜಿ ಅಧ್ಯಕ್ಷ  ಇಸ್ಮಾಯಿಲ್ ತಮಾಟಗಾರ, ಪ್ರಕಾಶ ಸರಶೆಟ್ಟಿ ಮತ್ತಿತರರು  ಭಾಗವಹಿಸುವರು ಎಂದು ಜೈ ಹನುಮಾನ್ ಕುಸ್ತಿ ಸಂಘದ  ಅಧ್ಯಕ್ಷ ಲಿಂಗರಾಜ್ ಹಡಪದ್ ಪ್ರಕಟಣೆ ತಿಳಿಸಿದೆ.

 

ಹೆಚ್ಚಿನ ಮಾಹಿತಿಗಾಗಿ

ಲಿಂಗರಾಜ್ ಹಡಪದ್- 99728 42966

ಕಲಂದರ್ ಮುಲ್ಲಾ- 99860 96472