ಕೊಳಗೇರಿ ಪ್ರದೇಶದ ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಅನಿಲ ಬೆನಕೆ

ಕೊಳಗೇರಿ ಪ್ರದೇಶದ ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಅನಿಲ ಬೆನಕೆ :
ಬೆಳಗಾವಿ 22 :ದಿನಾಂಕ 21.03.2023 ರಂದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆರವರು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನ ಶ್ರೀನಗರ, ಕಣಬರ್ಗಿಯ ಸಾಗರ ನಗರ, ಗ್ಯಾಂಗವಾಡಿ, ವಡ್ಡರವಾಡಿ ಹಾಗೂ ರಾಮನಗರದ ನಿವಾಸಿಗಳಿಗೆ ಕಳೆದ 30 ವರ್ಷಗಳಿಂದ ಆಗದೆ ಇರುವ ಮನೆಗಳ ಹಕ್ಕುಪತ್ರ ವಿತರಣೆಯನ್ನು ಅಲ್ಲಿನ ರಹವಾಸಿಗಳ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದ ಶಾಸಕರು ಸಾರ್ವಜನಿಕರ ಹಲವಾರು ವರ್ಷಗಳ ಬೇಡಿಕೆ ಹಾಗೂ ಸ್ವಂತ ಸೂರುಗಳನ್ನು ಹೊಂದಲು ಅನುಕೂಲವಾಗುವಂತೆ ಕಳೆದ 30 ವರ್ಷಗಳಿಂದ ಆಗದೇ ಇರುವ ಹಕ್ಕು ಪತ್ರ ವಿತರಣೆಯನ್ನು ಎಲ್ಲ ಮನೆಗಳಿಗೆ ಅವರ ಕನಸಿನ ಮನೆಗಳನ್ನು ಹೊಂದಲು ಅವರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ನಿವಾಸಿಗಳು ಸಬ್-ರಿಜಿಸ್ಟ್ರಾರ ನಲ್ಲಿ ನೊಂದಣ ಪಡಿಸಿಕೊಂಡು ಸಿ.ಟಿ.ಎಸ್ ಉತಾರನಲ್ಲಿ ಹೆಸರು ಸೇರ್ಪಡೆಗೊಳ್ಳುತ್ತಿವೆ ಎಂದು ಮಾಹಿತಿ ನೀಡಿದರು. ಇದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಕೊಳಗೇರಿ ಅಭಿವೃದ್ದಿ ನಿಗಮದ ಅಧಿಕಾರಿಗಳು, ಫಲಾನುಭವಿಗಳು, ಕಾರ್ಯಕರ್ತರು, ಮುಖಡರುಗಳು ಹಾಗೂ ಸ್ಲಂ ಪ್ರದೇಶದ ನಿವಾಸಿಗಳು ಉಪಸ್ಥಿತರಿದ್ದರು.