ಅಬಕಾರಿ ಆಯುಕ್ತರ ಚುನಾವಣೆ ಪೂರ್ವ ಸಿದ್ಧತೆ ಸಭೆ

ಬೆಳಗಾವಿ, ಮಾ.23 : ವಿಧಾನಸಭಾ ಸರ್ವತ್ರಿಕ ಚುನಾವಣೆ ಪೂರ್ವ ಸಿದ್ಧತೆ ಸಭೆಯ ನಿಮಿತ್ತ ಮಾ. 23 2023 ರಂದು ಬೆಳಿಗ್ಗೆ 12 ಗಂಟೆಗೆ ಬೆಂಗಳೂರು ಅಬಕಾರಿ ಆಯುಕ್ತರು, ಬೆಳಗಾವಿ ಕೇಂದ್ರ ಸ್ಥಾನ ಅಬಕಾರಿ ಅಪರ ಆಯುಕ್ತರು, ಅಬಕಾರಿ ಜಂಟಿ ಆಯುಕ್ತರು, ಸೂಚನೆಯ ಮೆರೆಗೆ ಎಪ್ರಿಲ್ ಮೇ 2023 ರ ತಿಂಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಚುಣಾವಣೆ ನಡೆಸುವ ಉದ್ದೇಶದಿಂದ ಅಬಕಾರಿ ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ದೃಷ್ಟಿಯಿಂದ ಬೆಳಗಾವಿ ದಕ್ಷಿಣ ವ್ಯಾಪ್ತಿಯ ಮದ್ಯ ಮಾರಾಟ ಸನ್ನದುದಾರರಿಗೆ, ಖಾನಾಪೂರ ತಾಲೂಕುಗಳ ಮದ್ಯ ಮಾರಾಟ ಸನ್ನದುದಾರರಿಗೆ ಅಧಿಕಾರಿಗಳು ಸೂಚನೆಗಳನ್ನು ನೀಡಿದರು.
ಸನ್ನದುಗಳಲ್ಲಿ ನಿಗದಿಪಡಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು ಹಾಗೂ ಯಾವುದೇ ಉಲ್ಲಂಘನೆಗೆ ಅವಕಾಶ ಮಾಡಿಕೊಡದಿರುವುದು. ವಿಶೇಷವಾಗಿ ಸಿಎಲ್ 2 ಸನ್ನದುಗಳಲ್ಲಿ ಬಿಡಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡುವುದು, ಸಿಎಲ್-2 ಮತ್ತು ಎಂ.ಎಸ್.ಐ.ಎಲ್.(ಸಿಎಲ್-11) ಸನ್ನದು ಮಳಿಗೆಗಳಲ್ಲಿ ಸಿ.ಸಿ.ಟಿವಿ ಅಳವಡಿಸುವುದು,
ಮದ್ಯವನ್ನು ಒಬ್ಬ ವ್ಯಕ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಪಾರ್ಸಲ್ ನೀಡುವಂತಿಲ್ಲ. ಅದರಲ್ಲೂ ಚುನಾವಣಾ ಕಣದಲ್ಲಿದ್ದ ಯಾವುದೇ ಅಭ್ಯರ್ಥಿಗಳಿಗೆ ಅಥವಾ ಕಾರ್ಯಕರ್ತರುಗಳಿಗೆ ಮದ್ಯ ಸರಬರಾಜು ಮಾಡುವಂತಿಲ್ಲ,
ಮದ್ಯ ಮಾರಾಟ ಸನ್ನದುಗಳಿಗೆ ನಿಗಧಿಪಡಿಸಿರುವ ಸಮಯ ಪಾಲನೆಯನ್ನು ಕಡ್ಡಾಯವಾಗಿ ನಿರ್ವಹಿಸುವುದು, ಚುನಾವಣೆಯಲ್ಲಿ ಸ್ಪರ್ದಿಸಿದ ಅಭ್ಯರ್ಥಿಗಳು, ಪಕ್ಷಗಳು ಮತದಾರರಿಗೆ ಮದ್ಯ ಖರೀದಿಸಲು ಟೋಕನ್‍ನ್ನು ಮದ್ಯದ ಅಂಗಡಿಗಳಿಗೆ ನೀಡುವ ಸಂಭವ ಇದ್ದು ಈ ರೀತಿ ಯಾವುದೇ ಅಭ್ಯರ್ಥಿಯ ಪರ ಟೋಕನ್‍ಗಳನ್ನು ಪಡೆದು ಮದ್ಯವನ್ನು ನೀಡುವಂತಿಲ್ಲ.
ಸನ್ನದು ಆವರಣದಲ್ಲಿ ಹಾಗೂ ಅಕ್ಕ ಪಕ್ಕ ಮದ್ಯದ ಜಾಹಿರಾತು ಪ್ಲೇಕ್ಸ್ ಫಲಕಗಳನ್ನು, ಭಾವ ಚಿತ್ರಗಳನ್ನು ಹಾಕದಂತೆ ಎಚ್ಚರ ವಹಿಸಿವುದು.
ಸನ್ನದು ಆವರಣದಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಚಲನ-ವಲನಗಳನ್ನು ಗಮನಿಸಿವುದು ಹಾಗೂ ಈ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡುವುದು, ಚುನಾವಣಾ ಆಯೋಗವು ಘೋಷಿಸುವ ಚುನಾವಣಾ ಮುಕ್ತ ದಿನಗಳನ್ನು ಕಡ್ಡಾಯವಾಗಿ ಪಾಲಿಸುವುದು ಹಾಗೂ ಸದರಿ ದಿನಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡದೇ ಇರುವುದು.
ಅನಧೀಕೃತ/ನಕಲಿ/ಗೋವಾ ಮದ್ಯದ ಸಂಗ್ರಹ/ಸಾಗಾಟ ಕಂಡು ಬಂದಲ್ಲಿ ತಕ್ಷಣವೇ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು,
ಅಬಕಾರಿ ಅಕ್ರಮಗಳ ಬಗ್ಗೆ ದೂರು ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ನಿಯಂತ್ರಣಾ ಕೊಠಡಿಗೆ ಮತ್ತು ಇಲಾಖೆಯ ಟೋಲ್ ಫ್ರೀ ನಂ.1800 4252 550 ಕ್ಕೆ ಮಾಹಿತಿಗಳ ಬಗ್ಗೆ ಕರೆ ಮಾಡಲು ಸನ್ನದುದಾರರಿಗೆ ವಿನಂತಿಸಲಾಯಿತು.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಅಥವಾ ಸನ್ನದು ಆವರಣದಲ್ಲಿ ಯಾವುದೇ ಅಚಾತುರ್ಯ ನಡೆಯುವಲ್ಲಿ ಸನ್ನದುದಾರರು ಅವಕಾಶ ನೀಡಿದಲ್ಲಿ ಸನ್ನದುಗಳು ಅಮಾನತ್ತು ಆದಲ್ಲಿ ಸನ್ನದುದಾರರೇ ನೇರವಾಗಿ ಜವಾಬ್ದಾರರಾಗಿರುತ್ತಾರೆ,
ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಅಬಕಾರಿ ಅಕ್ರಮಗಳು ನಡೆಯದಂತೆ ಜಾಗೃತರಾಗಿರುವಂತೆ ಎಲ್ಲ ಸನ್ನದುದಾರರು ಬದ್ಧರಾಗಿರುತ್ತಾರೆಂದು ಸಭೆಯಲ್ಲಿ ಮೌಖಿಕ ಹೇಳಿಕೆ ಪಡೆಯಲಾಯಿತು,ಸನ್ನದು ಅಂಗಡಿಗಳಲ್ಲಿ ಮದ್ಯ ವ್ಯಾಪಾರ ನಡೆಸಿದ ವಹಿವಾಟಿನ ಬಗ್ಗೆ ಅಂದೇ ಅಕೌಂಟ್ ಪುಸ್ತಕದಲ್ಲಿ ಬರೆಯುವುದು ಮತ್ತು ಈ ಬಗ್ಗೆ ಮಾಹಿತಿಯನ್ನು ನಮೂನೆಯಲ್ಲಿ ಸಲ್ಲಿಸುವುದು.
ಮದ್ಯದ ಮಳಿಗೆಗಳ ಆವರಣ ಸ್ವಚ್ಛತೆ ಇಟ್ಟುಕೊಳ್ಳುವುದು & ಅಧೀಕೃತ ನೌಕರರುಗಳು ಹಾಜರ್‍ಪಡಿಸುವುದು, ಸಿಎಲ್-2, ಸಿಎಲ್-4, ಸಿಎಲ್-7, ಸಿಎಲ್-9, ಸಿಎಲ್-8 ಮತ್ತು ಎಂ.ಎಸ್.ಐ.ಎಲ್.(ಸಿಎಲ್-11) ಷರತ್ತು ನಿಯಮಗಳನುಸಾರ ಮದ್ಯದ ಮಳಿಗೆಗಳು ಕಾರ್ಯನಿರ್ವಹಿಸುವುದು.
ಇವುಗಳನ್ನು ಪಾಲಿಸದ ಇದ್ದಲ್ಲಿ ನಿಷಪಕ್ಷಪಾತವಾಗಿ ಕ್ರಮ ಜರುಗಿಸಲಾಗುವುದೆಂದು ಅಬಕಾರಿ ಉಪ ಆಯುಕ್ತರಾದ ವನಜಾಕ್ಷಿ ಎಂ. ರವರು ತಿಳಿಸಿದರು.