Belagavi News In Kannada | News Belgaum

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಈ ಕೆಳಕಂಡ ದಿನಾಂಕಗಳಂದು ಭೇಟಿ ನೀಡಲಿದ್ದು,

ಲಂಚ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಸಲ್ಲಿಸಬಹುದು

 

ಬೆಳಗಾವಿ, ಮಾ.23 : ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಗೆ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಮಾ.24 ರಿಂದ ಮಾ.27 ರವರೆಗೆ ಭೇಟಿ ನೀಡಿ, ಸಾರ್ವಜನಿಕರಿಂದ ಹವಾಲಗಳನ್ನು ಸ್ವೀಕರಿಸಲಿದ್ದಾರೆ.
ಶುಕ್ರವಾರ (ಮಾ.24) ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಳಗಾವಿಯ ಲೋಕಾಯುಕ್ತ ಕಚೇರಿಯಲ್ಲಿ ಡಿಎಸ್.ಪಿ ಬಿ.ಎಸ್ ಪಾಟೀಲ ಹಾಗೂ ರಾಮದುರ್ಗ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಪಿಐ ಯು.ಎಸ್ ಅವಟಿ ಅವರು ಸಾರ್ವಜನಿಕರಿಂದ ಆವಾಲುಗಳನ್ನು ಸ್ವೀಕರಿಸಲಿದ್ದಾರೆ.
ಬೆಳಗಾವಿ ತಾಲೂಕಿನ ಹಾಗೂ ರಾಮದುರ್ಗ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಸರಕಾರಿ ಅಧಿಕೃತ ಕೆಲಸ ನಿರ್ವಹಿಸಲು ಹಣ, ವಸ್ತು ಲಂಚ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆ 0831-2950756 ಹಾಗೂ 0831-2421922 ಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಈ ಕೆಳಕಂಡ ದಿನಾಂಕಗಳಂದು ಭೇಟಿ ನೀಡಲಿದ್ದು, ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳÀನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಸದರಿ ಸರಕಾರಿ ಕೆಲಸ ನಿರ್ವಹಿಸಲು ಹಣ/ವಸ್ತು/ಲಂಚ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಈ ಕಛೇರಿ ದೂರವಾಣಿ ಸಂಖ್ಯೆಗಳಾದ (1) 0831-2950756 ಮತ್ತು (2) 0831-2421922, ನೇದ್ದವುಗಳನ್ನು ಸಂಪರ್ಕಿಸಬಹುದಾಗಿದೆ.
ಅ.
ನಂ ಅಹವಾಲು ಸ್ವೀಕರಿಸುವ ಅಧಿಕಾರಿಯವರ ಹೆಸರು ಮತ್ತು ಹುದ್ದೆ. ಭೇಟಿ ನೀಡುವ ಸ್ಥಳ ದಿನಾಂಕ ವೇಳೆ ಅಹವಾಲು ಸ್ವೀಕರಿಸುವ ಸ್ಥಳ
1 ಶ್ರೀ ಬಿ.ಎಸ್.ಪಾಟೀಲ, ಡಿ.ಎಸ್.ಪಿ, ಕ.ಲೋ.ಬೆಳಗಾವಿ ಬೆಳಗಾವಿ
ತಾಲೂಕು 24.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಕರ್ನಾಟಕ ಲೋಕಾಯುಕ್ತ, ಕಛೇರಿ, ಬೆಳಗಾವಿ
2 ಶ್ರೀ ಜೆ.ರಘು, ಡಿ.ಎಸ್.ಪಿ.ಕಲೋ, ಬೆಳಗಾವಿ. ಗೋಕಾಕ ತಾಲೂಕು 27.03.2023 ಮುಂಜಾನೆ 1030 ಗಂಟೆಯಿಂದ 0100 ಗಂಟೆ ಪ್ರವಾಸಿ ಮಂದಿರ
ಗೋಕಾಕ.
3 ಶ್ರೀ ಜೆ.ರಘು, ಡಿ.ಎಸ್.ಪಿ.ಕಲೋ, ಬೆಳಗಾವಿ. ಮೂಡಲಗಿ ತಾಲೂಕು 27.03.2023 ಮದ್ಯಾಹ್ನ 0200 ಗಂಟೆಯಿಂದ 0430 ಗಂಟೆ ತಹಶೀಲ್ದಾರ ಕಛೇರಿ ಮೂಡಲಗಿ
4 ಶ್ರೀ ಭರತ ಎಸ್ ಆರ್ ಡಿಎಸ್‍ಪಿ, ಕ.ಲೋ.ಬೆಳಗಾವಿ. ಸವದತ್ತಿ ತಾಲೂಕು 29.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಪ್ರವಾಸಿ ಮಂದಿರ ಸವದತ್ತಿ
5 ಶ್ರೀ ಭರತ ಎಸ್ ಆರ್, ಡಿಎಸ್‍ಪಿ, ಕ.ಲೋ.ಬೆಳಗಾವಿ. ಬೈಲಹೊಂಗಲ ತಾಲೂಕು 30.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಪ್ರವಾಸಿ ಮಂದಿರ ಬೈಲಹೊಂಗಲ
6 ಶ್ರೀಮತಿ ಅನ್ನಪೂರ್ಣ ಎಮ್ ಹುಲಗೂರ, ಪಿಐ, ಕ.ಲೋ.ಬೆಳಗಾವಿ ಕಿತ್ತೂರು ತಾಲೂಕು 28.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಪ್ರವಾಸಿ ಮಂದಿರ ಕಿತ್ತೂರು
7 ಶ್ರೀಮತಿ ಅನ್ನಪೂರ್ಣ ಎಮ್ ಹುಲಗೂರ, ಪಿಐ, ಕ.ಲೋ.ಬೆಳಗಾವಿ ಖಾನಾಪೂರ ತಾಲೂಕು 29.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ

ಪ್ರವಾಸಿ ಮಂದಿರ ಖಾನಾಪೂರ
8 ಶ್ರೀ ಪಿ.ಆರ್.ಧಬಾಲಿ, ಪಿಐ, ಕ.ಲೋ.ಬೆಳಗಾವಿ ನಿಪ್ಪಾಣಿ ತಾಲೂಕು 28.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಪ್ರವಾಸಿ ಮಂದಿರ
ನಿಪ್ಪಾಣಿ
9 ಶ್ರೀ ರವಿಕುಮಾರ ಧರ್ಮಟ್ಟಿ, ಪಿಐ, ಕ.ಲೋ.ಬೆಳಗಾವಿ ಕಾಗವಾಡ ತಾಲೂಕು 29.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಪ್ರವಾಸಿ ಮಂದಿರ ಕಾಗವಾಡ
10 ಶ್ರೀ ನಿರಂಜನ ಎಮ್ ಪಾಟೀಲ, ಪಿಐ, ಕ.ಲೋ.ಬೆಳಗಾವಿ
ಚಿಕ್ಕೋಡಿ ತಾಲೂಕು 27.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಪ್ರವಾಸಿ ಮಂದಿರ ಚಿಕ್ಕೋಡಿ
11 ಶ್ರೀ ನಿರಂಜನ ಎಮ್ ಪಾಟೀಲ, ಪಿಐ, ಕ.ಲೋ.ಬೆಳಗಾವಿ
ರಾಯಬಾಗ ತಾಲೂಕು

28.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಪ್ರವಾಸಿ ಮಂದಿರ ರಾಯಬಾಗ

12 ಶ್ರೀ ಯು.ಎಸ್.ಅವಟಿ ಪಿಐ ಕ.ಲೋ.ಬೆಳಗಾವಿ ರಾಮದುರ್ಗ ತಾಲೂಕು 24.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಪ್ರವಾಸಿ ಮಂದಿರ
ರಾಮದುರ್ಗ
13 ಶ್ರೀ ಯು.ಎಸ್.ಅವಟಿ ಪಿಐ ಕ.ಲೋ.ಬೆಳಗಾವಿ ಹುಕ್ಕೇರಿ
ತಾಲೂಕು 27.03.2023 ಮುಂಜಾನೆ 1100 ಗಂಟೆಯಿಂದ 0200 ಗಂಟೆ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯದ ಸಭಾಭವನ