ಸಾಧಕರಿಗೆ ಡಾ.ಪ್ರಭಾಕರ ಕೋರೆ ಅವರಿಂದ ಅಭಿನಂದನೆ

ಬೆಳಗಾವಿ 23 : ಲಿಂಗರಾಜ ಕಾಲೇಜಿನ ಇಬ್ಬರು ಸಾಧಕರು ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಅದ್ವಿತೀಯ ಸಾಧನೆಯನ್ನು ಗೈದಿದ್ದಾರೆ. ಬಿ.ಕಾಮ್ 5ನೇ ಸೆಮ್‍ನಲ್ಲಿ ಅಧ್ಯಯನ ಮಾಡುತ್ತಿರುವ ಕುಮಾರಿ ಸಿಮ್ರಾನ್ ಗೌಂಡಾಲ್ಕರ್ ಇಟಲಿಯಲ್ಲಿ ನಡೆದ ಪ್ಯಾರಾ ಸ್ವಿಮ್ಮಿಂಗ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಂತೆಯೇ ಬಿ.ಕಾಂ. ಮೊದಲನೇ ಸೆಮಿಸ್ಟರ್ ವಿದ್ಯಾರ್ಥಿ ಶ್ರೀನಾಥ್ ದಳವಿಲಕ್ನೋ (ಯುಪಿ) ನಲ್ಲಿ ನಡೆಯಲಿರುವ 400 ಮೀಟರ್ ಓಟದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‍ಗೆ ಆಯ್ಕೆಯಾಗಿದ್ದಾನೆ. ಈ ಇಬ್ಬರು ಸಾಧಕರಿಗೆ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಕೆಎಲ್‍ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಭಿನಂದಿಸಿದ್ದಾರೆ. ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ಉಪಸ್ಥಿತರಿದ್ದರು.