ಅಬ್ಬರಕ್ಕೆ ಬಾಕ್ಸ್ ಆಪೀಸ್ ಉಡೀಸ್

ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜಮನೆತನದ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಸ್ಥಾಪನೆಗೊಳ್ಳುವ ಸಮಯ. ಆಗ ಮತ್ತೆ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲೇ ಹಿಡಿದಿಟ್ಟುಕೊಳ್ಳುವ ಹಪಹಪಿ ರಾಜರುಗಳದ್ದಾದರೆ, ಹೊಸದಾಗಿ ಜಾರಿಯಾದ ಪ್ರಜಾಪ್ರಭುತ್ವವನ್ನೆ ತನ್ನ ಅಂಕೆಯಲ್ಲಿಟ್ಟುಕೊಂಡು ಆಡಿಸಬೇಕೆಂಬ ಭೂಗತ ಲೋಕದ ಬಯಕೆ ಮತ್ತೊಂದು ಕಡೆ.
ಒಟ್ಟಾರೆ ಇಬ್ಬರ ನಡುವಿನ ಘರ್ಷಣೆ ತಾರಕಕ್ಕೇರಿ ಶ್ರೀಮಂತ ಕೋಟೆ ಅಮರಾಪುರ ವನ್ನು ಯಾರು ಕಬ್ಜ ಮಾಡುತ್ತಾರೆ ಅನ್ನೋದು ಸದ್ಯ ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ನ ಕಬ್ಜ ಮಾಡುತ್ತಿರುವ ಕಬ್ಜ ಚಿತ್ರದ ಒನ್ ಲೈನ್ ಸ್ಟೋರಿ.
ನಿದೇಶಕ ಆರ್.ಚಂದ್ರು, ಬಹುಕೋಟಿ ಯಲ್ಲಿ ನಿರ್ಮಿಸಿ ನಿರ್ದೇಶಿಸಿರುವ ಕಬ್ಜ ಮೇಕಿಂಗ್ನಲ್ಲಿ ಮತ್ತೂಮ್ಮೆ ಕನ್ನಡಿಗರ ತಾಕತ್ತನ್ನ ವಿಶ್ವಕ್ಕೆ ಪರಿಚಯಿಸಿದ್ದಾರೆ. ಕೆಜಿಎಫ್, ಕಾಂತಾರ ರೀತಿಯಲ್ಲೇ ಮುನ್ನುಗ್ಗಿ ನಡೆಯುತ್ತಿದೆ.
ಅಣ್ಣನನ್ನ ಅಮಾನುಷವಾಗಿ ಕೊಂದ ಭೂಗತ ಲೋಕವನ್ನ, ಒಂದು ಹನಿ ರಕ್ತವನ್ನು ಕಂಡರೆ ಭಯಪಡುವ ಅಮಾಯಕ ಪೈಲಟ್ ಹೇಗೆ ಕತ್ತಲೆ ಪ್ರಪಂಚವನ್ನೇ ಗಡಗಡ ಅಂತ ನಡುಗಿಸುತ್ತಾನೆ. ಈ ವಿಷಯವನ್ನು ಹೇಳುವ ಪರಿ ಹೊಸತನದಿಂದ ಕೂಡಿದೆ.
ಬಿಡುಗಡೆಯಾದ ಮೊದಲ ದಿನವೇ ಭಾರತಾದ್ಯಂತ 54ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆಯಂತೆ. ಅಷ್ಟೇ ಅಲ್ಲದೆ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಭಾರತದಾಚೆಗೂ ಕಬ್ಜ ಸಿನಿಮಾ ಬಿಡುಗಡೆಯಾಗಿದ್ದು, ಅಲ್ಲೂ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಕೊನೆಯಲ್ಲಿ ಶಿವಣ್ಣ ಎಂಟ್ರಿಕೊಟ್ಟು ಕಬ್ಜಾ-2 ಗೆ ಮುನ್ಸೂಚನೆ ಕೊಟ್ಟಿರುವುದು ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.