ಅಕ್ರಮ ಸಾರಾಯಿ ಸಾಗಾಟ: 7.52 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡ ಉದ್ಯಮಬಾಗ ಪೊಲೀಸರು

ಬೆಳಗಾವಿ: ಅಕ್ರಮವಾಗಿ ಗೋವಾದಿಂದ ಮದ್ಯ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿತನನ್ನು ಬೆಳಗಾವಿಯ ಉದ್ಯಮಭಾಗ ಪೊಲೀಸರು ಬಂಧಿಸಿ, ಆತನಿಂದ 7.52,260 ರೂ. ಮೌಲ್ಯದ ಮದ್ಯ ಹಾಗೂ ಒಂದು ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪರಸರಾಮ ಬಾಹುರಾವ ಪೆಟ್ಟೇಕರ(31 ) ಸಾ.ಹೊಸೂರ ಬಸವನಗಲ್ಲಿ ಖಾಸಭಾಗ ಶಹಾಪೂರ, ಬಂಧಿತ ಆರೋಪಿ. ಮಜಗಾವಿಯ 5ನೇ ರೇಲ್ವೆ ಗೇಟ್ ಹತ್ತಿರ ವಾಹನ ಒಂದಲ್ಲಿ ಗೋವಾ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಖಡೇಬಜಾರ್ ಎಸಿಪಿ ಅರುಣಕುಮಾರ ಕೋಲೂರು ಇವರ ಮಾರ್ಗದರ್ಶನದಲ್ಲಿ ಉದ್ಯಮಬಾಗ ಠಾಣೆ ಪೊಲೀಸ್ ಇನ್ಸಪೆಕ್ಟರ್ ಆರ್.ಎಸ್ ಬಿರಾದಾರ ಮತ್ತು ಸಿಬ್ಬಂದಿಗಳಾದ ಪಿಎಸ್ ಐ ಶ್ರೀಮತಿ ಜಿ.ಎನ್.ಗುರ್ಲಹೊಸೂರ ಮತ್ತು ಟಿ.ಬಿ ಕುಂಚನೂರ, ಶ್ರೀಮತಿ ಎ.ಎಮ್.ಕಾಂಬಳೆ, ಭರಮಾ ಕರೆಗಾರ, ಸಿ.ಎಸ್.ಹಂಚಿನಾಳ, ಆನಂದ ಬಿದನೂರ, ಐ.ಎಮ್ ಚವಲಗಿ, ಎಸ್.ಎ.ಕರ್ಕಿ ಇವರನ್ನೊಳಗೊಂಡ ತಂಡವು ದಾಳಿ ಮಾಡಿ ಸುಮಾರು 7.52,260 ರೂಪಾಯಿ ಮೌಲ್ಯದ ಮದ್ಯ ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ./////