Belagavi News In Kannada | News Belgaum

ಸಿದ್ಧರಾಮಯ್ಯ ಸೋಲಿಸಲು ಸ್ವಪಕ್ಷೀಯರೇ ಸಂಚು-ಪ್ರತಾಪಸಿಂಹ • ವಾರಂಟಿ ಕಾರ್ಡ್ ವಿತರಿಸುವ ಕಾಂಗ್ರೆಸ್‍ನ ಗ್ಯಾರಂಟಿ ಮುಗಿದಿದೆ

 

ಹುಕ್ಕೇರಿ : ಸಿಎಂ ಹುಚ್ಚು ಕನಸು ಕಾಣುತ್ತಿರುವ ಸಿದ್ಧರಾಮಯ್ಯಗೆ ಕ್ಷೇತ್ರವೇ ಸಿಗದಂತೆ ಸ್ವಪಕ್ಷಿಯರೇ ಷಡ್ಯಂತ್ರ ರೂಪಿಸಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಹರಿಹಾಯ್ದರು.
ಪಟ್ಟಣದ ವಿಶ್ವರಾಜ್ ಸಭಾಭವನದಲ್ಲಿ ಶುಕ್ರವಾರ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಮೂಲ ಕಾಂಗ್ರೆಸಿಗರು ಸಂಚು ಹೆಣೆದು ಸೋಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರಕ್ಕೆ ಬರಬೇಕೆನ್ನುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ವಾರಂಟಿ ಕಾರ್ಡ್ ವಿತರಿಸುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ವಾರಂಟಿ ಕಾರ್ಡ್ ವಿತರಿಸುತ್ತಿರುವ ಕಾಂಗ್ರೆಸ್‍ನ ಗ್ಯಾರಂಟಿ ಮುಗಿದಿದೆ. ಕಾಂಗ್ರೆಸ್ ನಾಯಕರು ಸೋಲುವ ಹತಾಸೆಯಲ್ಲಿ ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್‍ನಲ್ಲಿ ಕುಟುಂಬ ಕದನ ಜೋರಾಗಿದೆ ಎಂದು ಅವರು ಹೇಳಿದರು.
ಹಿರಾಶುಗರ ಅಧ್ಯಕ್ಷ ನಿಖಿಲ ಕತ್ತಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಪರ ಒಲವು ಹೆಚ್ಚಾಗಿದ್ದು ಪಕ್ಷದ ಅಭ್ಯರ್ಥಿ ಗೆಲುವುದರಲ್ಲಿ ಯಾವುದೇ ಅನುಮಾನವಿಲ್ಲ. ತಂದೆ ದಿ.ಉಮೇಶ ಕತ್ತಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದು ಕತ್ತಿ ಕುಟುಂಬಕ್ಕೆ ಮತ್ತೊಮ್ಮೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ವಿಎಸ್‍ಎಲ್ ನಿರ್ದೇಶಕ ಪೃಥ್ವಿ ಕತ್ತಿ, ಜಿಪಂ ಮಾಜಿ ಸದಸ್ಯ ಪವನ ಕತ್ತಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಬ್ಲಾಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸತ್ಯಪ್ಪಾ ನಾಯಿಕ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ಮಹಾವೀರ ನಿಲಜಗಿ, ರಾಜು ಮುನ್ನೋಳಿ, ಹಿರಾಶುಗರ ನಿರ್ದೇಶಕರಾದ ಅಶೋಕ ಪಟ್ಟಣಶೆಟ್ಟಿ, ಸುರೇಶ ದೊಡಲಿಂಗನವರ, ಬಸವರಾಜ ಮರಡಿ, ಅಜ್ಜಪ್ಪ ಕಲ್ಲಟ್ಟಿ, ಮುಖಂಡರಾದ ಮಲ್ಲಿಕಾರ್ಜುನ ಬಾಳಿಕಾಯಿ, ದೀಪಕ ಪಾಟೀಲ, ಈರಣ್ಣ ಅಂಗಡಿ, ಪ್ರಕಾಶ ಶೃಂಗೇರಿ
ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜೇಶ ನೇರ್ಲಿ ಸ್ವಾಗತಿಸಿದರು. ಪ್ರಜ್ವಲ ನಿಲಜಗಿ ನಿರೂಪಿಸಿದರು. ಸತೀಶ ಅಪ್ಪಾಜಿಗೋಳ ವಂದಿಸಿದರು. ಇದಕ್ಕೂ ಮೊದಲು ಕ್ಷೇತ್ರದ ವಿವಿಧ ಹಳ್ಳಿಗಳಿಂದ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಸಮಾವೇಶ ಸ್ಥಳಕ್ಕೆ ಆಗಮಿಸಿದರು.