ವಿವಿಧ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ
ವಿದ್ಯುತ್ ಪ್ರಸರಣ: ಸಾರ್ವಜನಿಕರ ಗಮನಕ್ಕೆ

ಬೆಳಗಾವಿ, ಮಾ.24: ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಾರ್ಚ.24 ರಿಂದ 30 ರವರೆಗೆ ಭೇಟಿ ನೀಡಲಿದ್ದಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಸದರಿ ಸರ್ಕಾರಿ ಕೆಲಸ ನಿರ್ವಹಿಸಲು ಹಣ, ಲಂಚ, ವಸ್ತುಗಳ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕುವಾರು ಭೇಟಿ ವಿವರ:
ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ. ಬಿ.ಎಸ್ ಪಾಟೀಲ, ಮಾ.24 ರಂದು ಬೆಳಿಗ್ಗೆ 11 ಗಂಟೆಯಿಂದ 2 ವರೆಗೆ ಕ. ಲೋ. ಕಛೇರಿ ಬೆಳಗಾವಿ, ಯು.ಎಸ್.ಅವಟಿ ಇವರು ಮಾ.24 ರಂದು ಬೆಳಿಗ್ಗೆ 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ರಾಮದುರ್ಗ, ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಮಾ.27 ರಂದು ಬೆಳಿಗ್ಗೆ 10:30 ರಿಂದ 1 ಗಂಟೆವರೆಗೆ ಪ್ರವಾಸಿ ಮಂದಿರ ಗೋಕಾಕ, ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಮಾ.27 ರಂದು ಮಧ್ಯಾಹ್ನ 02 ರಿಂದ 4.30 ಗಂಟೆಯವರೆಗೆ ತಹಶೀಲ್ದಾರ ಕಛೇರಿ ಮೂಡಲಗಿ, ಕರ್ನಾಟಕ ಲೋಕಾಯುಕ್ತ ಪಿಐ .ನಿರಂಜನ ಎಮ್. ಪಾಟೀಲ ಮಾ.27 ರಂದು ಬೆಳಿಗ್ಗೆ 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ಚಿಕ್ಕೋಡಿ, ಪಿಐ ಯು.ಎಸ್. ಅವಟಿ ಇವರು ಮಾ.27 ರಂದು ಬೆಳಿಗ್ಗೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಹುಕ್ಕೇರಿ, ಇಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ.
ಕರ್ನಾಟಕ ಲೋಕಾಯುಕ್ತ ಪಿಐ. ನಿರಂಜನ ಎಮ್. ಪಾಟೀಲ ಮಾ.28 ರಂದು ಬೆಳಿಗ್ಗೆ 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ರಾಯಬಾಗ. ಪಿಐ ಅನ್ನಪೂರ್ಣ ಎಮ್. ಹುಲಗೂರ ಮಾ.28 ರಂದು ಬೆಳಿಗ್ಗೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಕಿತ್ತೂರು, ಪಿಐ ಪಿ.ಆರ್.ಧಬಾಲಿ ಮಾ.28 ರಂದು ಬೆಳಿಗ್ಗೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ನಿಪ್ಪಾಣಿ, ಅನ್ನಪೂರ್ಣ ಎಮ್. ಹುಲಗೂರ ಇವರು ಮಾ.29 ರಂದು 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ಖಾನಾಪೂರ, ಭೇಟಿ ನೀಡಲಿದ್ದಾರೆ.
ಡಿ.ಎಸ್.ಪಿ. ಭರತ ಎಸ್.ಆರ್ ಇವರು ಮಾ.29 ರಂದು ಬೆಳಿಗ್ಗೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಸವದತ್ತಿ, . ಡಿ.ಎಸ್.ಪಿ. ಭರತ ಎಸ್.ಆರ್ ಇವರು ಮಾ.29 ರಂದು ಬೆಳಿಗ್ಗೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಸವದತ್ತಿ, ಪಿಐ ಪಿ.ರವಿಕುಮಾರ ಧರ್ಮಟ್ಟಿ ಇವರು ಮಾ. 29 ರಂದು ಬೆಳಿಗ್ಗೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಕಾಗವಾಡ, ಡಿ.ಎಸ್.ಪಿ.ಭರತ ಎಸ್ ಆರ್ ಇವರು ಮಾ.30 ರಂದು 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಬೈಲಹೊಂಗಲ ಭೇಟಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆ 0831-2950756 ಹಾಗೂ 0831-2421922 ಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿಯ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ವಿದ್ಯುತ್ ಪ್ರಸರಣ: ಸಾರ್ವಜನಿಕರ ಗಮನಕ್ಕೆ
ಬೆಳಗಾವಿ, ಮಾ.24: ಬೆಳಗಾವಿ ಜಿಲ್ಲೆಯ ಹುಕ್ಕೆರಿ ತಾಲೂಕಿನ ಕನಗಲಾ ಇಂಡಸ್ರ್ಟಿಯಲ್ ಏರಿಯಾ ದಲ್ಲಿ (ಸ್ವಯಂ ನಿರ್ವಹಣೆÉಯಲ್ಲಿ, ಕೆಐಎಡಿಬಿ) ಹೊಸದಾಗಿ ನಿರ್ಮಿಸಿರುವ 220/110ಕೆವಿ ವಿದ್ಯುತ್ ಸ್ವಿಕರಣಾ ಕೇಂದ್ರದಿಂದ ಹಾಲಿ ಚಾಲ್ತಿಯಲ್ಲಿರುವ 220ಕೆವಿ ಬೆಳಗಾವಿ ಚಿಕ್ಕೋಡಿ ಜೋಡಿ ಗೋಪುರಗಳ ಮೇಲೆ 0.45 ಕಿಮಿ ಉದ್ದದ 220 ಕಿ.ವಿ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸಲಾಗಿದೆ. ಸದರಿ 220ಕೆವಿ ವಿದ್ಯುತ್ ಪ್ರಸರಣ ಮಾರ್ಗವು ಹುಕ್ಕೇರಿ ತಾಲೂಕಿನ ಕನಗಲಾ ಇಂಡಸ್ರ್ಟಿಯಲ್ ಏರಿಯಾ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹಾಯ್ದು ಹೋಗುತ್ತದೆ.
ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಮಾ.27, 2023 ರಂದು ಯಾವುದೇ ಕ್ಷಣದಲ್ಲಿ ವಿದ್ಯುತ್ತನ್ನು ಹರಿಬಿಡಲಾಗುವದು ಕಾರಣ ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲಿ ಅಥವಾ ತಂತಿಗಳನ್ನು ಮುಟ್ಟುವುದಾಗಲಿ ಹಸಿರು ಟೊಂಗೆಗಳನ್ನು ಎಸೆಯುವುದಾಗಲಿ ಮತ್ತು ಲೈನ್ ಕೆಳಗಡೆ ದನಕರುಗಳನ್ನು ಕಟ್ಟುವುದಾಗಲಿ, ಗಿಡಮರಗಳನ್ನು ನೆಡುವುದಾಗಲಿ, ಮನೆ ಗುಡಿಸಲುಗಳನ್ನು ನಿರ್ಮಿಸುವುದಾಗಲಿ ಇವುಗಳನು ಮಾಡಬಾರದು.
ಒಂದು ವೇಳೆ ಇಂತಹ ಕೃತ್ಯಗಳನ್ನು ಯಾರಾದರು ಎಸಗಿದಲ್ಲಿ ಮುಂದೆ ಒದಗಬಹುದಾದ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///