ಯಶಸ್ವಿಯಾದ ಕರ್ನಾಟಕ ಚಲನಚಿತ್ರೋತ್ಸವ

ಹುಬ್ಬಳ್ಳಿ : ಕರ್ನಾಟಕ ಚಲನಚಿತ್ರ ಮತ್ತು ಕಿರುಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಹಾಗೂ ಚೇತನ ಫೌಂಡೇಷನ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಧಾರವಾಡದ ರಂಗಾಯಣದಲ್ಲಿ ಮಾ.17ರಿಂದ ಮಾ.20ರವರೆಗೆ ಮೂರು ದಿನಗಳ ಕಾಲ ನಡೆದ ಕರ್ನಾಟಕ ಚಲನಚಿತ್ರೋತ್ಸವ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದೆ.
ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ ಮುಂತಾದ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಭಾ ಶೋಧ, ಹೊಸ ಚಿತ್ರಗಳ ಪೆÇ್ರೀಮೋಷನ್, ಬಿಡುಗಡೆ ಸೇರಿದಂತೆ ವಿಭಿನ್ನ ರೀತಿಯ ಕಾರ್ಯಕ್ರಮಗಳು ಈ ಮೂರು ದಿನಗಳ ಕಾಲ ಹಮ್ಮಿಕೊಂಡು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಕಿರುತೆರೆ, ಚಲನಚಿತ್ರದ ವಿವಿಧ ವಿಭಾಗಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ ಚಂದ್ರಶೇಖರ ಹೊಸದೊಂದು ಭರವಸೆಯನ್ನು ಹುಟ್ಟುಹಾಕಿದ್ದಾರೆ.
ಕಲಾಪೋಷಕರಮಠ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು. ಜನಪ್ರಿಯ ಯುವ ನಾಯಕರು, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ) ಕಾರ್ಯದರ್ಶಿ ಮಂಜುನಾಥ ಹಗೇದಾರ ಚಿತ್ರೋತ್ಸವವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಚಿತ್ರೋತ್ಸವಕ್ಕೆ ಬೇಕಾದ ಬೆಂಬಲ ನೀಡುವದಾಗಿ ಹೇಳಿದರು ,ಚಲನಚಿತ್ರ ನಟ ಸುರೇಶ ಹೆಬ್ಳೀಕರ್, ಗೀತರಚನೆಕಾರರು,ಸಂಭಾಷಣೆಕಾರ ಮನ್ವರ್ಷಿ ನವಲಗುಂದ, ಚಲನಚಿತ್ರ ನಿರ್ದೇಶಕ ಅರವಿಂದ ಮುಳಗುಂದ, ಸಿನಿಮಾ ಪಿಆರ್ ಓ ಡಾ. ವೀರೇಶ ಹಂಡಿಗಿ, ಡಾ ಪ್ರಭು ಗಂಜಿಹಾಳ, ಕಲಾ ಪೋಷಕರಾದ ಪೀರಸಾಬ ನದಾಫ, ಸುರೇಶ ಕೋರಕೊಪ್ಪ, ಮೇರು ಐಎಎಸ್,ಕೆಎಎಸ್ ಸ್ಟಡಿ ಸೆಂಟರ್ ನಿರ್ದೇಶಕ ರುದ್ರೇಶ ಮೇಟಿ, ನಟಿ,ರೂಪದರ್ಶಿ ವರ್ಷಿಣಿ, ಚಿತ್ರನಿರ್ದೇಶಕ ಮಂಜು ಪಾಂಡವಪುರ ,ಕದಂಬರಿಕಾರ ರಾಜು ಗಡ್ಡಿ, ನಿರ್ದೇಶಕ ನಿಂಗರಾಜ ಸಿಂಗಾಡಿ, ಮಲ್ಯ ಬಾಗಲಕೋಟ, ದಿನಪತ್ರಿಕೆ ಸಂಪಾದಕರಾದ ಎಸ್ ಎಸ್.ಪಾಟೀಲ ಸೇರಿದಂತೆ ಅನೇಕ ಕಿರುಚಿತ್ರ, ಚಲನಚಿತ್ರಗಳಿಗೆ ಸಂಬಂಧಿಸಿದವರು , ಪ್ರಶಸ್ತಿಗೆ ಆಯ್ಕೆಯಾದ ನಲವತ್ತು ಚಲನಚಿತ್ರ, ಕಿರುಚಿತ್ರಗಳ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರು ಭಾಗವಹಿಸಿದ್ದರು.
ಸಾಮಾನ್ಯವಾಗಿ ಚಲನಚಿತ್ರೋತ್ಸವ ಎಂದರೆ ಬೆಂಗಳೂರ ಎನ್ನುವವರಿಗೆ ಉತ್ತರ ಕರ್ನಾಟಕದ ಕಲಾಬಳಗ, ತಾಂತ್ರಿಕ ಬಳಗಕ್ಕೆ ವೇದಿಕೆಗಳು ಗಗನಕುಸುಮವಾಗಿರುವಾಗ ಇಲ್ಲಿನ ಅದ್ಭುತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕಾರ್ಯ ಮಾಡಿದ ಚಂದ್ರಶೇಖರ ಅವರನ್ನು ಮೆಚ್ಚಲೆಬೇಕು. ಚಂದ್ರಶೇಖರ ಮಾಡಲಗೇರಿ ಸಾರಥ್ಯದ ಈ ಚಲನಚಿತ್ರೋತ್ಸವದ ಮೊದಲ ದಿನ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬವಾದ್ದರಿಂದ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಪುನೀತ ಪ್ರಶಸ್ತಿ, ರಾಜರತ್ನ ಹಾಗೂ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಜೆ ಚಿತ್ರ ಪ್ರದರ್ಶನ ಹಾಗೂ ಚಿತ್ರದ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ , ಎರಡನೇ ದಿನ ಒಟ್ಟು ಎರಡು ಚಲನಚಿತ್ರ, ನಾಲ್ಕು ಕಿರುಚಿತ್ರ ಹಾಗೂ ಎರಡು ಅಲ್ಬಮ್ ಗೀತೆಗಳನ್ನು ಬೆಳ್ಳಿ ತರೆಯಲ್ಲಿ ಪ್ರದರ್ಶಿಸಲಾಯಿತು. ಎರಡು ಚಿತ್ರಗಳ ಪ್ರದರ್ಶನದ ನಂತರ ಆಯಾ ಚಿತ್ರತಂಡದಿಂದ ಚಿತ್ರದ ಜನಾಭಿಪ್ರಾಯಗಳನ್ನು , ಮಾರ್ಗದರ್ಶನ ಪಡೆಯಲಾಯಿತು.
ಮೂರನೇ ದಿನ ಸಾಂಸ್ಕøತಿಕ ಕಾರ್ಯಕ್ರಮಗಳು, ಚಿತ್ರ ಪ್ರದರ್ಶನ ಹಾಗೂ ರಾಜರತ್ನ ಚಿತ್ರ ಪ್ರಶಸ್ತಿ ನೀಡಲಾಯಿತು. ಸಂಘಟಕರಾದ ಚಂದ್ರಶೇಖರ ಮಾಡಲಗೇರಿಯವರು ಕೆಲವೆ ತಿಂಗಳಲ್ಲಿ ಕಾರ್ಯಕ್ರಮ ರೂಪರೇಷೆ ಸಿದ್ದಪಡಿಸಿಕೊಂಡರೂ ಮೊದಲ ಪ್ರಯತ್ನದಲ್ಲಿ ಅಷ್ಟಿಷ್ಟು ಅಡೆತಡೆಗಳ ನಡುವೆಯೂ ಉತ್ತರ ಕರ್ನಾಟಕದಲ್ಲಿ ಚಿತ್ರೋತ್ಸವವನ್ನು ಯಶಸ್ವಿಯಾಗಿ ಮುಗಿಸಿದ್ದು ಮುಂದಿನ ಸಲ ಇನ್ನೂ ಚೆನ್ನಾಗಿ ನಿರ್ವಹಿಸಬಲ್ಲೆನೆಂಬ ಭರವಸೆ ಅವರಲ್ಲಿ ಮೂಡಿಸಿದೆ. ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆಯನ್ನು ಸಂತೋಷ ಭದ್ರಾಪೂರ ಮಾಡಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.