Belagavi News In Kannada | News Belgaum

ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಹಗಲಿರುಳು ಬೆನ್ನೆಲುಬಾಗಿ ಶ್ರಮಿಸಲಾಗುತ್ತಿದೆ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ

ಹುಕ್ಕೇರಿ : ಪರಿಶಿಷ್ಟರ ಪರ ಕತ್ತಿ ಕುಟುಂಬ ಸದಾ ಸೇವೆ ಸಲ್ಲಿಸುತ್ತಿದ್ದು ದಮನಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಹಗಲಿರುಳು ಬೆನ್ನೆಲುಬಾಗಿ ಶ್ರಮಿಸಲಾಗುತ್ತಿದೆ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

 

ಪಟ್ಟಣದ ಹಳೆ ತಹಸೀಲದಾರ ಕಚೇರಿ ಆವರಣದಲ್ಲಿ ಶುಕ್ರವಾರ ಡಾ.ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆ ಪ್ರತಿಷ್ಠಾಪಿಸಿ ಬಳಿಕ ಆವರಣದಲ್ಲಿ ೨೫ ಲಕ್ಷ ರೂ ವೆಚ್ಚದಲ್ಲಿ ಕೈಗೆತ್ತಿಕೊಂಡ ಸೌಂದರ್ಯಿಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

 

ಕ್ಷೇತ್ರದಲ್ಲಿ ಎಸ್ಸಿಎಸ್ಟಿ ಜನರ ನೆರವಿಗೆ ಕತ್ತಿ ಕುಟುಂಬ ಸದಾ ಸಿದ್ಧವಿದೆ. ದಲಿತರ ಆಶೋತ್ತರಗಳನ್ನು ಈಡೇರಿಸುವಲ್ಲಿ ತಮ್ಮ ಕುಟುಂಬ ತಲ್ಲೀನವಾಗಿದ್ದು ಪರಿಶಿಷ್ಟರ ಸಮಗ್ರ ಅಭಿವೃದ್ಧಿಗೆ ರೂಪರೇಷೆ ಸಿದ್ಧಪಡಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸರ್ಕಾರದ ಸೌಲಭ್ಯ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದರು.

 

ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಿಖಿಲ್ ಕತ್ತಿ ಮಾತನಾಡಿ, ಸಾಧಕರ ಪ್ರತಿಮೆಗಳು ಯುವ ಪೀಳಿಗೆಗೆ ಪ್ರೇರಣೆಯಾಗಲಿ. ಮಹಾನ್ ಪುರುಷರ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ಯುವ ಪೀಳಿಗೆಗೆ ಇತಿಹಾಸ, ಜೀವನಾದರ್ಶ, ಚರಿತ್ರೆ, ಪರಂಪರೆಯನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಮುಖಂಡರಾದ ಬಸವರಾಜ ಮಟಗಾರ, ಸುರೇಶ ತಳವಾರ, ಮಲ್ಲಿಕಾ

ರ್ಜುನ ರಾಶಿಂಗೆ, ಉದಯ ಹುಕ್ಕೇರಿ, ಬಿ.ಕೆ.ಸದಾಶಿವ, ರಮೇಶ ಹುಂಜಿ, ಅಪ್ಪಣ್ಣಾ ಖಾತೇದಾರ, ಶ್ರೀನಿವಾಸ ವ್ಯಾಪಾರಿ, ಕೆಂಪಣ್ಣಾ ಶಿರಹಟ್ಟಿ, ಲಕ್ಷ್ಮಣ ಹೂಲಿ, ಕೆ.ವೆಂಕಟೇಶ, ಬಸವರಾಜ ಖಡಕಬಾವಿ, ಮಹಾಂತೇಶ ತಳವಾರ, ಸದಾಶಿವ ಕರೆಪ್ಪಗೋಳ, ಮುತ್ತು ಕಾಂಬಳೆ, ವಿಠ್ಠಲ ಮಾದರ, ಕರೆಪ್ಪ ಗುಡೆನ್ನವರ,

ರಾಜೇಂದ್ರ ಮೋಶಿ, ಶಿವು ದೊಡಮನಿ, ಮಂಜುನಾಥ ಪಡದಾರ, ರೋಹಿತ ತಳವಾರ, ಸಿಪಿಐ ಮಹ್ಮದರಫೀಕ್ ತಹಶೀಲ್ದಾರ ಮತ್ತಿತರರು ಉಪಸ್ಥಿತರಿದ್ದರು.