ಸಾಹಿತಿಗಳಿಗು ನಮ್ಮಗು ಬಹಳ ವ್ಯತಾಸವಿರುತ್ತದೆ ಸಾಹಿತಿಗಳು ಚಿಂತನೆ ಮಾಡುತ್ತಾರೆ ರಾಹುಲ ಕಟಗೇರಿ

ಕಾಗವಾಡ:ಸಾಹಿತಿಗಳಿಗು ನಮ್ಮಗು ಬಹಳ ವ್ಯತಾಸವಿರುತ್ತದೆ ಸಾಹಿತಿಗಳುಚಿಂತನೆ ಮಾಡುತ್ತಾರೆ ಇದರಿಂದ ಬೆಳವಣಿಗೆಯಾಗುತ್ತದೆ’ ಆದರೆ ನಾವು ಚಿಂತೆ ಮಾಡುತ್ತೆವೆ ಆದರಿಂದ ನಮ್ಮಗೆ ಬಿಪಿ,ಶುಗರ ಬರುತ್ತದೆ ಎಂದು ನ್ಯಾಯವಾದಿಗಳಾದ ರಾಹುಲ ಕಟಗೇರಿ ಹೇಳಿದರು.
ಅವರು ತಾಲೂಕಿನ ಶೇಡಬಾಳ ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಮುರಗುಂಡಿಯ ಶ್ರೀ ಮುರಸಿದ್ದೇಶ್ವರ ಕಲಾಪೋಷಕ ಸಂಘ ಮತ್ತು ಶೇಡಬಾಳಪಟ್ಟಣ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ವಿಚಾರ ಸಂಕಿರಣ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವದಲ್ಲಿ ಸತ್ಕಾರ ಸ್ವಿಕರಿಸಿ ಮಾತನಾಡುತ್ತಾ
ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನವು ಹೇಗೆಯಿರುತ್ತದೆ ಎಂಬ ಸನ್ನಿವೇಶದ ಬಗ್ಗೆ ಮಾಹಿತಿ ನೀಡುವಾಗ, ದೇಶದ ಆಗೀನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಕರ್ನಾಟಕ ಹಾಗು ಮಹಾರಾಷ್ಟ್ರರಾಜ್ಯ ದ ಭಾಷೆಯ ವಾದವಿವಾದದ ಬಗ್ಗೆ ಚರ್ಚಿಸಲು ಆಗೀನ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಹಾಗೂ ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಯಶ್ವಂತರಾವ್ ಚವ್ಹಾಣ್‌ಯವರೊಂದಿಗೆ ಚರ್ಚಿಸುವಾಗ ಬಿ.ಡಿ.ಜತ್ತಿಯವರು ರಾಜ್ಯದ ಭಾಷೆಯಅಲ್ಲಿ ಮಾನ
ಬಿಟ್ಟುಕೊಡದೆ ವಾದವಿವಾದ ಮಾಡಿದ್ದರು.
ಕೊನೆಗೆ ಹೊರಗೆ ಹೋಗುವಾಗ ಈ ಇಬ್ಬರು ಹೆಗಲು ಮೇಲೆ ಕೈಹಾಕಿ ಹೋಗುವದನ್ನು ಕಂಡು ಪ್ರಧಾನಿ ಇಂದಿರಾ ಗಾಂಧಿಯವರನ್ನು ವಿಚಾರಿಸಿದಾಗ ನಾವಿಬ್ಬರು ಸ್ನೇಹಿತರು, ಈ ವಿಷಯ ಬೇರೆ. ರಾಜ್ಯದ ಭಾಷೆ ಅಭಿಮಾನಿ ಬಿಟ್ಟು ಕೂಡುವದಿಲ್ಲ ಎಂದದನ್ನು ನೆನಪಿಸಿದ ಅವರು ಇಗ ಹೈಕೋರ್ಟ್ ದಲ್ಲಿ ಕೂಡ ಕನ್ನಡ ದಲ್ಲಿ ತಿರ್ಪುನೀಡಿ ಕನ್ನಡ ಕಲಿಯಿರಿ ಕನ್ನಡ ಸಾಹಿತಿಗಳು ಬರೆದ ಪುಸ್ತಕಗಳನ್ನು ಕೊಂಡುಕೊಂಡ ಓದಿ ಮಹಾಪುರುಷರ ಸಾಧನೆ ತಿಳಿದುಕೋಳಿ ಎಂದರು.
ಶ್ರೀ ಮುರಸಿದ್ದೇಶ್ವರ ಕಲಾ ಪೋಷಕ ಸಂಘದ ಅಧ್ಯಕ್ಷ ಸುರೇಶ ವಾಘಮೋಡೆ ಮಾತನಾಡಿ ಕರ್ನಾಟಕ ಸರಕಾರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇಲಾಖೆ ವತಿಯಿಂದ ರಾಜ್ಯದ ಗಡಿಯಲ್ಲಿ ಕನ್ನಡ ಭಾಷೆ ಉಳಿಸಿ, ಬೆಳಿಸಲು ಅನೇಕ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿದ್ದು, ಮುರಸಿದ್ದೇಶ್ವರ ಕಲಾಪೋಷಕ ಸಂಘ, ರಾಜ್ಯಮಟ್ಟದ ಕವಿಗೋಷ್ಟಿ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಯಶಸ್ವಿಯಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗಾಗಿ ಶ್ರಮಿಸಿದ ಸಾಹಿತಿಗಳು, ಮಾಧ್ಯಮದ ಪ್ರತಿನಿಧಿಗಳು ಕಲಾವಿದರನ್ನು ಅವರ ಸೇವೆ ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಲಾಗಿದೆ. ನಿರಂತರವಾಗಿ ಕನ್ನಡ ಭಾಷೆಯ ಬಗ್ಗೆ ಇಲ್ಲಿಯ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆಯೆಂದರು.
ರಾಮದುರ್ಗ ಸಾಹಿತಿ ಆನಂದ ಹಕ್ಕೆನ್ನವರ ಅಧ್ಯಕ್ಷ ತೆ ವಹಿಸಿದರು. ಭುವನೇಶ್ವರಿ ಮಾತೆ ಭಾವಚಿತ್ರ ಕ್ಕೆ ಶೇಡಬಾಳ ಗ್ರಾಮದ ಹಿರಿಯ ವರ್ಧಮಾನ ಪಾಟೀಲ ಪೂಜೆ ನೇರವೇರಿಸಿದರು.
ಇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಂ.ಕೆ.ಕಾಂಬಳೆ,,ಮಾಧ್ಯಮ ವಿಭಾಗದಲ್ಲಿ , ಪತ್ರಕರ್ತ ರಾದ,ಕುಮಾರ ಪಾಟೀಲ ಸುಕುಮಾರ ಬನ್ನೂರೆ ಹಾಗೂ, ವೈದ್ಯಕೀಯ ವಿಭಾಗದಲ್ಲಿ ಡಾ. ಅಶೋಕ ಪಾಟೀಲ, ಕೃಷಿ ವಿಭಾಗದಲ್ಲಿ ನಿರಂಜನ ನರಸಗೌಡರ, ನೋಟರಿಗಳಾದ ಬಾಬಾಸಾಬ ಗಣೆ, ನ್ಯಾಯವಾದಿ ರಾಹುಲ್ ಕಟಗೇರಿ, ಮಧುಕರ ಬಡಿಗೇರ , ಹಾಗು
ಪತ್ರಕರ್ತರಾದ ಬಸವರಾಜ ತಾರದಾಳ,ಲಕ್ಷ್ಮಣ ಸೂರ್ಯವಂಶಿ ಮುರಗೇಶ ಗಸ್ತಿ,ಸಂಜಯ ಕಾಟಕರ,ಭಾಸ್ಕರ ಐಹೋಳೆ,ಸಚೀನ ಮಾನೆ ಅವರಿಗೆ ಸತ್ಕರಿಸಿದರು.
ನಾನಾ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರಿಂದ ಭಜನ್, ಸುಗಮ ಸಂಗೀತ, ಜಾನಪದ ಸಂಗೀತ, ಕರಬಲ, ಭರತನಾಟ್ಯ, ಕವಿಗೋಷ್ಠಿ ವಿಚಾರ ಸಂಕಿರಣ ಕಾರ್ಯಕ್ರಮಗಳು ನಡೆದವು. ಕಲಾವಿದರನ್ನು, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
. ಸಾಹಿತಿ ಕಿಶನ್ ಗಡದೆಯವರು ಡಾ.ಪುನೀತ ರಾಜಕುಮಾರ ಅವರ ಕಲಾಕೃತಿ ರಚಿಸಿದರು. ಗಾಯಕಿ ಸ್ವಾತಿ ಕಿಡದಾಳ ‘ಬೊಂಬೆ ಹೇಳುತೈತೆ..’ ಈ ಹಾಡು ಹಾಡಿ ರಂಜಿಸಿದರು.
ಸಪ್ತಸ್ವರ ಕಲಾ ಸಂಗೀತ ಬಳಗ,ಬೆಳಗಾವಿಯ ರಾಜ್ಯಾಧ್ಯಕ್ಷೆ ವೀಣಾ ಕಿಡದಾಳ,ಹಿರಿಯಸಾಹಿತಿ ಎಂ.ಡಿ.ಅಲಾಸೆ, ಶೇಡಬಾಳ ಗ್ರಾಮದ ಮುಖಂಡರಾದ ರಾಯಗೌಡ,ಪಾಟೀಲ, ,ಆಶಪ್ಪ ಪಾಟೀಲ, ಭರತೇಶ ಪಾಟೀಲ,ನೇಮಿನಾಥ ಪಾಟೀಲ, ಎಂ.ಎ.ಗಣೆ, ಶಿವಕುಮಾರ ಶಿಂಧೆ, ಕುಮಾರ ಮಾಲಗಾಂವೆ, ಅನಿಲ ಮಾಲಗಾವೆ ಇತರರು ಇದ್ದರು.
,ಸನ್ಮತಿ ವಿದ್ಯಾಲಯದ ಶಿಕ್ಷಕ ಎಸ್.ಡಿ.ಮುತಾಲಿಕ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸುನೀಲ ಮಾಲಗಾಂವೆ ನಿರೂಪಿಸಿ ವಂದಿಸಿದರು.