ಶ್ರೀರಾಮ ನವಮಿ ಹಾಗೂ ಮಹಾವೀರ ಜಯಂತಿ ನಿಮಿತ್ಯ ಕಸಾಯಿಖಾನೆ ಬಂದ್

ಬೆಳಗಾವಿ, ಮಾ.27 : ಶ್ರೀರಾಮ ನವಮಿ ನಿಮಿತ್ಯ ಮಾರ್ಚ 30 ಗುರುವಾರ 2023 ರಂದು ಹಾಗೂ ಮಹಾವೀರ ಜಯಂತಿ ನಿಮಿತ್ಯ ಮಂಗಳವಾರ ಎಪ್ರಿಲ್ 4 2023 ರಂದು ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ/ ಮಾಂಸಾಹಾರಿ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ಸದರಿ ದಿನದಂದು ಕಸಾಯಿಖಾನೆ/ಮಾಂಸಾಹಾರಿ ಅಂಗಡಿ ಮಾಲೀಕರು ಆದೇಶವನ್ನು ಉಲ್ಲಂಘನೆ ಮಾಡಿರುವದು ಕಂಡು ಬಂದರೆ ಅಂತಹ ಮಾಲೀಕರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.///
ವಿವಿಧ ಪ್ರಕರಣಗಳ ಕುರಿತು ಜೂ. 24 ರಂದು ಲೋಕ ಅದಾಲತ್
ಬೆಳಗಾವಿ, ಮಾ.27 : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ವೈವಾಹಿಕ, ಕೌಟುಂಬಿಕ ಮತ್ತು ಪಾಲು ವಿಭಾಗಕ್ಕೆ, ಬ್ಯಾಂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳು ಹಾಗೂ ಚೆಕ್ ಬೌನ್ಸ, ಭಾರತ ದಂಡ ಸಂಹಿತೆಯ ರಾಜಿಯಾಗಬಲ್ಲ ಪ್ರಕರಣಗಳು, ಹಣಕಾಸಿನ ದಾವೆಗಳು, ಸಿವಿಲ್ ವ್ಯಾಜ್ಯಗಳು, ಮೋಟಾರ ವಾಹನ ಅಪಘಾತ ಪರಿಹಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಕಂದಾಯ ಪ್ರಕರಣಗಳು ಮತ್ತು ನ್ಯಾಯಾಲಯಗಳಲ್ಲಿ ತನಿಖೆಗೆ ಬಾಕಿ ಇರುವ ಇತರ ಎಲ್ಲಾ ರೀತಿಯ ರಾಜಿಯಾಗಬಹುದಾದಂತಹ ಪ್ರಕರಣಗಳ ಕುರಿತು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಮುಸ್ತಫಾ ಹುಸೈನ್ ಎಸ್.ಎ. ಇವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಎಲ್ಲ ನ್ಯಾಯಾಲಯಗಳಲ್ಲಿ ಹಾಗೂ ಎಲ್ಲಾ ತಾಲೂಕುಗಳ ನ್ಯಾಯಾಲಯಗಳಲ್ಲಿ ಜೂನ್.24 2023 ರಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲೆಯ ಎಲ್ಲಾ ನ್ಯಾಯಾಧೀಶರ ಹಾಗೂ ವಕೀಲರ ಸಹಯೋಗದಲ್ಲಿ ಲೋಕ ಅದಾಲತನ್ನು ಹಮ್ಮಿಕೊಳ್ಳಲಾಗಿದೆ.
ಸದರಿ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ತೆಗೆದುಕೊಂಡು ರಾಜಿ ಸಂಧಾನದ ಮುಖಾಂತರ ಇತ್ಯರ್ಥಪಡಿಸಲಾಗುವುದು. ಬ್ಯಾಂಕುಗಳು, ಕಕ್ಷಿದಾರರು ಹಾಗೂ ಜನ ಸಾಮಾನ್ಯರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ/ತಾಲೂಕಾ ಕಾನೂನು ಸೇವಾ ಸಮಿತಿಗಳನ್ನು ಕೂಡಲೇ ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ವಿಧಾನ ಸಭಾ ಚುನಾವಣೆ-2023 : ಅಬಕಾರಿ ನಿಯಂತ್ರಣಾ ಕೊಠಡಿಳ ಸ್ಥಾಪನೆ
ಬೆಳಗಾವಿ,
ಮಾ.27: ವಿಧಾನ ಸಭಾ ಚುನಾವಣೆ-2023 ನಿಮಿತ್ತ ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ ಚುನಾವಣೆಯನ್ನು ಶಾಂತಿಯುತ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವ ದೃಷ್ಟಿಯಿಂದ ಬೆಳಗಾವಿ ಉತ್ತರ ಜಿಲ್ಲಾ ವ್ಯಾಪ್ತಿಯಲಿ ಅಬಕಾರಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿರುತ್ತದೆ.
ಸದರಿ ಕಂಟ್ರೋಲ್ ರೂಮ್‍ಗಳಲ್ಲಿ 24ಘಿ7 ರಂತೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು,
ಬೆಳಗಾವಿ ಜಿಲ್ಲೆಯ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ರವರ ಕಛೇರಿ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 180004250136 (ಟೋಲ್ ಫ್ರೀ ನಂಬರ್), 08338-275727, ಮೊಬೈಲ್ ಸಂಖ್ಯೆ: 9449597077, ಚಿಕ್ಕೋಡಿ ಉಪ ವಿಭಾಗ 08338-273367, ಮೊಬೈಲ್ ಸಂಖ್ಯೆ 9449597076, ಅಥಣಿ ಉಪ ವಿಭಾಗ 08289-295108 ಮೊಬೈಲ್ ಸಂಖ್ಯೆ 8660305130 9743207345, ಅಥಣಿ ವಲಯ 08289-285210 ಮೊಬೈಲ್ ಸಂಖ್ಯೆ 8147198851, ಗೋಕಾಕ ವಲಯ 08332-229333 ಮೊಬೈಲ್ ಸಂಖ್ಯೆ 9632537065, ಚಿಕ್ಕೋಢಿ ವಲಯ 08338-274765 ಮೊಬೈಲ್ ಸಂಖ್ಯೆ 9632610160, ರಾಯಭಾಗ ವಲಯ 08331-225018 ಮೊಬೈಲ್ ಸಂಖ್ಯೆ 7760570183 ಹಾಗೂ ಹುಕ್ಕೇರಿ ವಲಯ 08333-274769 ಮೊಬೈಲ್ ಸಂಖ್ಯೆ 9449881317 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////