Belagavi News In Kannada | News Belgaum

ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯಕರ

ಬಾಗಲಕೋಟೆ: ಪ್ರಿಯತಮೆ  ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿ, ನಂತರ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಗುಡೂರು ಗ್ರಾಮದಲ್ಲಿ ನಡೆದಿದೆ.

ಪ್ರಿಯತಮೆ ನೇತ್ರಾವತಿ ವಡ್ಡರ್​(21), ಅಫ್ಜಲ್ ಸೊಲ್ಲಾಪುರ (27) ಗಾಯಾಳುಗಳು. ನೇತ್ರಾವತಿ ವಡ್ಡರ ಅವರ ದೇಹ ಶೇ 70 ರಷ್ಟು ಸುಟ್ಟಿದ್ದು, ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಫ್ಜಲ್ ಸೊಲ್ಲಾಪುರ ಅವರನ್ನು ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

​​ ನೇತ್ರಾವತಿ ವಡ್ಡರ್ ಅವರನ್ನು, ಅಫ್ಜಲ್ ಸೊಲ್ಲಾಪುರ ಪ್ರೀತಿಸುತ್ತಿದ್ದರು. ಇತ್ತೀಚಿಗೆ ನೇತ್ರವಾತಿ ಬೇರೆ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರಿಂದ ಕ್ರೋದಿತನಾಗಿದ್ದ ಅಫ್ಜಲ್​, ಇಂದು (ಮಾ.27) ನೇತ್ರಾವತಿ ಕೋಳಿ ಫಾರಂಗೆ ತೆರಳುತ್ತಿದ್ದ ವೇಳೆ, ಎಳೆದೊಯ್ದು ಕೃತ್ಯ ಎಸಗಿದ್ದಾನೆ. ಇದನ್ನು ಕಂಡು ಸ್ಥಳಕ್ಕೆ ಧಾವಿಸಿದ ಸ್ಥಳಿಯರು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನೇತ್ರಾವತಿಯ ದೇಹ ಶೇ 70 ರಷ್ಟು ಸುಟ್ಟಿದೆ. ಘಟನಾ ಸ್ಥಳಕ್ಕೆ ಅಮೀನಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.