ಏ.4 ರಂದು ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಆಚರಣೆ

ಬೆಳಗಾವಿ: ಬೆಳಗಾವಿಯಲ್ಲಿ ಕಳೆದ 25 ವರ್ಷಗಳಿಂದ ಕರ್ನಾಟಕ ಸರಕಾರ , ಜಿಲ್ಲಾಡಳಿತ ಬೆಳಗಾವಿ ಮತ್ತು ಸಮಸ್ತ ಜೈನ ಸಮಾಜದ ವತಿಯಿಂದ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಆಚರಣೆ ಮಾಡುತ್ತ ಬಂದಿದ್ದು, ಈ ವರ್ಷವೂ ಸಹ ಏ. 4ರಂದು ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಆಚರಣೆ ಮಾಡಲಾಗುವುದು ಎಂದು ಮಧ್ಯವರ್ತಿ ಸಮಿತಿಯ ಗೌರವ ಕಾರ್ಯದರ್ಶಿ ರಾಜೇಂದ್ರ ಜೈನ ಹೇಳಿದರು .
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಬೆಳಗಾವಿಯಲ್ಲಿ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಆಚರಿಸುತ್ತ ಬಂದಿದೆ. ಈ ವರ್ಷವೂ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಂಗಳವಾರದಂದು ಮಹಾವೀರ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ , ಗುರುವಾರ ಮಾ. 30 ರಂದು ಉತ್ಸವ ಸಖಿ ಅವರಿಂದ ರಂಗೋಲಿ, ಗುಂಪು ನೃತ್ಯ, ಫ್ಯಾಶನ ಶೋ, ಕಳಶ ಅಲಂಕಾರ, ಚಿತ್ರಕಲೆ, ಧಾರ್ಮಿಕ ಫ್ಯಾನ್ಸಿಡ್ರೆಸ , ಮತ್ತು ಮಿಥುನ ಶಾಸ್ತ್ರೀ ಹಾಗೂ ಅನೇಕಾಂತಶಾಸ್ತ್ರೀ ಅವರಿಂದ ಸಂಗೀತಮಯ ಭಕ್ತಿ ಸಂಜೆ ಕಾರ್ಯಕ್ರಮ ನಡೆಯಲಿದೆ.
ಶನಿವಾರ. ಏ.1 ರಂದು ನೃತ್ಯ ಸ್ಫರ್ಧೆ, ಭಜನಾ ಸ್ಪರ್ಧೆ, ರಾಣಿ ಅಬ್ಬಕ್ಕ ದೇವಿ ನಾಟಕ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವೀಶೇಷ ವೀಜೇತರಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳು ಮಹಾವೀರ ಭವನದಲ್ಲಿ ನಡೆಯಲಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿನಯ ಬಾಳಿಕಾಯಿ ಅವರು , ಏ.2 ರಂದು ಬೆಳಿಗ್ಗೆ 5 ಗಂಟೆಗೆ ಜಿತೋ ಲೆಡಿಂಗ ವಿಂಗ ವತಿಯಿಂದ ಬೆಳಗಾವಿಯಲ್ಲಿ ಅಹಿಂಸಾ ರನ್ ಮ್ಯಾರಾಥಾನ ಕಾರ್ಯಕ್ರಮ ನಡೆಯಲಿದೆ. ಅದರಂತೆ ಅಭಯ ಅವಲಕ್ಕಿ ಮಾತನಾಡಿ ಈ ಬಾರಿಯ ಶೋಭಾ ಯಾತ್ರೆಯಲ್ಲಿ ಬೆಳಿಗ್ಗೆ ಮೋಟಾರ ರ್ಯಾಲಿ ನಡೆಯಲಿದೆ . ಅದರಂತೆ ಶೋಭಾ ಯಾತ್ರೆಯಲ್ಲಿ ಸುಮಾರು 60 ರೂಪಕ ವಾಹನಗಳು ಭಾಗವಹಿಸಲಿದ್ದು, ಅವುಗಳಲ್ಲಿ ಭಗವಾನ ಮಹಾವೀರರ ಸಂದೇಶ ಸಾರುವ ರೂಪಕ ವಾಹನಗಳಿರುವವು ಎಂದರು.
ಸಮಿತಿಯ ಗೌರವ ಕಾರ್ಯಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ ಅವರು ಮಾತನಾಡಿ, ಏ. 4 ರಂದು ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ನಗರದ ಸಮಾದೇ”ಗಲ್ಲಿಯಿಂದ ಶೋಭಾ ಯಾತ್ರೆ ಪ್ರಾರಂಭವಾಗುವುದು,. ತದನಂತರ ರಾಮದೇವ ಗಲ್ಲಿ, ಕಿರ್ಲೋಸ್ಕರ ರೋಡ, ರಾಮಲಿಂಗ ಖಿಂಡ ಗಲ್ಲಿ, ಟಿಳಕಚೌಕ, ಶೇರಿ ಗಲ್ಲಿ, ಶನಿ ಮಂದಿರ ಎಸ್.ಪಿ.ಎಮ್.ರೋಡ ಕೋರೆ ಗಲ್ಲಿ, ಶಹಾಪೂರ ಗೋವಾವೇಸ ಮುಖಾಂತರ ಮಾರ್ಗವಾಗಿ ಮಹಾವೀರ ಭವನದಲ್ಲಿ ಮುಕ್ತಾಯವಾಗಲಿದೆ. ತದ ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಕುಂತಿನಾಥ ಕಲಮನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.//////