Belagavi News In Kannada | News Belgaum

ಪ್ಯಾನ್‌ ಕಾರ್ಡ್‌-ಆಧಾರ್‌ ಲಿಂಕ್‌ ಗಡುವನ್ನು ವಿಸ್ತರಿಸಿಲ್ಲ: ಮಾ.31ರಂದು ಕೊನೆಯ ದಿನ

ನವದೆಹಲಿ: ಪ್ಯಾನ್‌ ಕಾರ್ಡ್‌-ಆಧಾರ್‌ ಕಾರ್ಡನ್ನು ಲಿಂಕ್‌ ಮಾಡುವ ಪ್ರಕ್ರಿಯೆಯ ಅಂತಿಮ ಗಡುವನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಲ್ಲಿ ಮಾ.31ರೊಳಕ್ಕೆ ಈ ಪ್ರಕ್ರಿಯೆಯನ್ನು ಪೂರೈಸಲೇಬೇಕು ಎಂಬ ಸಂದೇಶವೇ ಇದೆ.

ಹಾಗಾಗಿ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಖಚಿತವಾಗಿದೆ. ಪ್ರಸ್ತುತ ಇದನ್ನು ಲಿಂಕ್‌ ಮಾಡಲು 1000 ರೂ.ಗಳನ್ನು ಪಾವತಿಸಬೇಕು. ಈ ಪ್ರಕ್ರಿಯೆಯಿಂದ 80 ವರ್ಷ ದಾಟಿದವರು, ಅನಿವಾಸಿ ಭಾರತೀಯರು ಸೇರಿ ಇನ್ನೂ ಹಲ ವಿಭಾಗಗಳಲ್ಲಿ ಬರುವ ಜನರಿಗೆ ವಿನಾಯ್ತಿ ನೀಡಲಾಗಿದೆ.//////