Belagavi News In Kannada | News Belgaum

ಅನಧಿಕೃತವಾಗಿ ಬಸ್‍ನಲ್ಲಿ ಸಾಗಿಸ್ತಿದ್ದ 27.34 ಲಕ್ಷ ರೂ. ಜಪ್ತಿ

ಬೆಳಗಾವಿ: ಮಹಾರಾಷ್ಟ್ರ ಸರ್ಕಾರಿ ಬಸ್‍ನಲ್ಲಿ ಸಾಗಿಸುತ್ತಿದ್ದ 27.34 ಲಕ್ಷ ಹಣವನ್ನ ಬೆಳಗಾವಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ತಾಲೂಕಿನ ಬಾಚಿ ಚೆಕ್‍ಪೋಸ್ಟ್ ನಲ್ಲಿ ದಾಖಲೆ ಇಲ್ಲದೇ ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಪಾಂಡುರಂಗ ಎಂಬವರು ಹಣ ಸಾಗಿಸುತ್ತಿದ್ದರು.
ಇತ್ತ ತಪಾಸಣೆಯ ಮಾಡುವ ಸಂದರ್ಭದಲ್ಲಿ ಟೂರಿಸ್ಟ್ ಬ್ಯಾಗ್‍ನಲ್ಲಿ 27 ಲಕ್ಷ 34 ಸಾವಿರ ಹಣ ಪತ್ತೆಯಾಗಿದೆ. ಸದ್ಯ ಹಣವನ್ನು ಜಪ್ತಿ ಮಾಡಿಕೊಂಡ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////